ADVERTISEMENT

Fact Check: ರಾಹುಲ್ ಗಾಂಧಿ–ನಿತೀಶ್ ಕುಮಾರ್ ಭೇಟಿಯ ಚಿತ್ರ ಹಳೆಯದು

ಫ್ಯಾಕ್ಟ್ ಚೆಕ್
Published 14 ಅಕ್ಟೋಬರ್ 2024, 11:10 IST
Last Updated 14 ಅಕ್ಟೋಬರ್ 2024, 11:10 IST
Venugopala K.
   Venugopala K.

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಲ್ಲದೆ, ಉಭಯ ನಾಯಕರು ಇತ್ತೀಚೆಗೆ ಭೇಟಿಯಾಗಿದ್ದು, ಪ್ರಮುಖ ರಾಜಕೀಯ ಬದಲಾವಣೆ ಆಗಲಿದೆ ಎಂಬ ಬರಹಗಳೂ ಚಿತ್ರದ ಜೊತೆ ಕಂಡುಬಂದಿವೆ.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಚಿತ್ರದಲ್ಲಿ ಕಾಣಬಹುದಾಗಿದೆ.

ಸುದ್ದಿಸಂಸ್ಥೆ ಪಿಟಿಐನ ಫ್ಯಾಕ್ಟ್‌ ಚೆಕ್ ಡೆಸ್ಕ್ ಈ ಕುರಿತಂತೆ ಪರಿಶೀಲನೆ ನಡೆಸಿದ್ದು, ಚಿತ್ರದ ಕುರಿತಾಗಿ ಹಂಚಿಕೊಳ್ಳುತ್ತಿರುವ ಮಾಹಿತಿ ಸುಳ್ಳೆಂದು ತಿಳಿದುಬಂದಿದೆ. 2023ರ ಏಪ್ರಿಲ್‌ನಲ್ಲಿ ತೆಗೆದ ಚಿತ್ರ ಇದಾಗಿದ್ದು, ವಿರೋಧ ಪಕ್ಷಗಳ ಉದ್ದೇಶಿತ ಇಂಡಿಯಾ ಬಣದ ಪ್ರಮುಖ ನಾಯಕರಾಗಿ ನಿತೀಶ್ ಕಾಣಿಸಿಕೊಂಡಿದ್ದರು.

ADVERTISEMENT

ನವದೆಹಲಿಯ ಖರ್ಗೆ ಅವರ ನಿವಾಸದಲ್ಲಿ ನಡೆದ ವಿರೋಧ ಪಕ್ಷಗಳ ನಾಯಕರ ಸಭೆಗಳ ಒಂದು ಚಿತ್ರ ಇದಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸಂಬಂಧವೇ ಇಲ್ಲದ ಸುಳ್ಳು ಮಾಹಿತಿ ಜೊತೆ ಹಂಚಿಕೊಳ್ಳಲಾಗುತ್ತಿದೆ.

ಲೋಕಸಭೆ ಚುನಾವಣೆಗೂ ಮುನ್ನವೇ ಇಂಡಿಯಾ ಬಣ ತೊರೆದಿದ್ದ ನಿತೀಶ್ ಕುಮಾರ್‌, ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿದ್ದರು. ಚುನಾವಣೆ ಬಳಿಕ ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ರಾಹುಲ್ ಗಾಂಧಿ ಮತ್ತು ನಿತೀಶ್ ಭೇಟಿಯ ಉದ್ದೇಶವೇನು। ಎಂಬತ್ಯಾದಿ ಬರಹಗಳ ಜೊತೆ ಚಿತ್ರ ಹಂಚಿಕೊಳ್ಳಲಾಗುತ್ತಿದೆ.

ಈ ಚಿತ್ರದ ಅಸಲಿಯತ್ತನ್ನು ಪತ್ತೆಮಾಡಲು, ಪಿಟಿಐ ತಂಡವು ಗೂಗಲ್‌ ಲೆನ್ಸ್‌ನಲ್ಲಿ ರಿವರ್ಸ್ ಸರ್ಚ್ ಮಾಡಿದೆ. ಇದರಲ್ಲಿ 2023ರ ಏಪ್ರಿಲ್ 14ರಂದು ವರದಿಯೊಂದರ ಜೊತೆ ಈ ಚಿತ್ರ ಬಳಸಿರುವುದು ಕಂಡುಬಂದಿದೆ.

ಆಜ್‌ತಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಉಭಯ ನಾಯಕರ ಭೇಟಿ ಕುರಿತ ಸಂಪೂರ್ಣ ವಿಡಿಯೊ ಸಹ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.