ADVERTISEMENT

Fact check: ಹಿಂದೂ ಮಹಿಳೆ ತನ್ನ ಮಗನನ್ನೇ ಮದುವೆ ಆಗಿರುವುದು ಸುಳ್ಳು

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 0:48 IST
Last Updated 1 ಜುಲೈ 2024, 0:48 IST
   

ವಿಕಾಸ್ ಪಾಠಕ್ ಎನ್ನುವ ವ್ಯಕ್ತಿ, ಮೂರು ವರ್ಷದ ಹಿಂದೆ ತನ್ನ ತಂದೆ ಅಪಘಾತವೊಂದರಲ್ಲಿ ಸಾವಿಗೀಡಾದ ನಂತರ ತಾಯಿ ಜ್ಯೋತಿ ಪಾಠಕ್ ಅವರನ್ನು ಮದುವೆಯಾಗಿದ್ದಾರೆ ಎಂದು ಪ್ರತಿಪಾದಿಸುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವರು ಅದನ್ನು ಧರ್ಮದ ಆಧಾರದಲ್ಲಿ ಟೀಕಿಸುತ್ತಿದ್ದು, ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಲಕ್ಷಾಂತರ ಮಂದಿ ಈ ವಿಡಿಯೊ ವೀಕ್ಷಿಸಿದ್ದು, ಸಾವಿರಾರು ಮಂದಿ ರೀಟ್ವೀಟ್ ಮಾಡಿದ್ದಾರೆ. 

ವಿಡಿಯೊ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರಲ್ಲಿ ಒಂದು ಚಿತ್ರವಿರುವುದು ಕಂಡು ಬರುತ್ತದೆ. ಅದನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಅದು ‘ಔಟ್‌ಲುಕ್ ಇಂಡಿಯಾ’ ಪತ್ರಿಕೆಯಲ್ಲಿ 2022ರ ಫೆಬ್ರುವರಿಯಲ್ಲಿ ಪ್ರಕಟವಾದ ಲೇಖನಕ್ಕೆ ಸಂಬಂಧಿಸಿದ ಚಿತ್ರ ಎನ್ನುವುದು ಕಂಡುಬಂತು. ಚಿತ್ರದಲ್ಲಿರುವುದು ವಿಜಯಕುಮಾರಿ ಮತ್ತು ಆಕೆಯ ಮಗ ಕನ್ಹಯ್ಯ ಎನ್ನುವುದು ತಿಳಿದುಬಂತು. ವಿಜಯಕುಮಾರಿ 1993ರಲ್ಲಿ ಕಾನ್ಪುರದಲ್ಲಿ ನಡೆದಿದ್ದ ಕೊಲೆಯೊಂದರ ಆರೋಪದ ಮೇಲೆ ಜೈಲು ಸೇರಿ 20 ವರ್ಷ ಶಿಕ್ಷೆ ಅನುಭವಿಸಿದ್ದರು. 2013ರಲ್ಲಿ ಆಕೆಯ ಮಗ ಕನ್ಹಯ್ಯ ಜಾಮೀನು ಮೊತ್ತ ಸಲ್ಲಿಸಿ ತಾಯಿಯ ಬಿಡುಗಡೆಗೆ ಕಾರಣರಾಗಿದ್ದರು. ಆಗ ತೆಗೆದ ಚಿತ್ರವನ್ನು ಮದುವೆಯ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT