ಸಂತರೊಬ್ಬರು ಧ್ಯಾನ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ಹಿಮಾಲಯದ ಕೊರೆಯುವ ಚಳಿಯಲ್ಲಿ ಕುಳಿತು ಅವರು ಧ್ಯಾನ ಮಾಡುತ್ತಿದ್ದಾರೆ. ಅವರ ದೇಹವು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದೆ. ಇದು ಸನಾತನ ಧರ್ಮದ ಶಕ್ತಿ’ ಎಂದು ಚಿತ್ರವನ್ನು ಬಿಂಬಿಸಲಾಗಿದೆ. ಟ್ವಿಟರ್‌ನಲ್ಲಿ ಈ ಚಿತ್ರಕ್ಕೆ 5,000ಕ್ಕೂ ಹೆಚ್ಚು ಲೈಕ್‌ಗಳು ದೊರೆತಿವೆ ಮತ್ತು ಹಲವಾರು ಬಾರಿ ಈ ಚಿತ್ರ ಶೇರ್ ಆಗಿದೆ.
ಇದು ಸುಳ್ಳು ಮಾಹಿತಿ ಎಂದು ದ ಕ್ವಿಂಟ್ ವರದಿ ಮಾಡಿದೆ. ಈ ಚಿತ್ರದಲ್ಲಿ ಇರುವವರು ‘1008 ಮಹಾಂತ್ ಬಾಬಾ ಭಲೇ ಗಿರಿ ಜಿ ಮಹಾರಾಜ್’ ಎಂಬುವವರು. ‘ಬಾಬಾ ಸರ್ಬಂಗಿ’ ಎಂಬ ಅವರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅವರೇ ಈ ಚಿತ್ರವನ್ನು 2019ರ ಜೂ.18 ರಂದು ಪೋಸ್ಟ್ ಮಾಡಿದ್ದಾರೆ. ಅವರು ‘ಅಗ್ನಿ ತಪಸ್ಯ’ ಕೈಗೊಂಡಾಗ ಈ ಚಿತ್ರ ತೆಗೆಯಲಾಗಿದೆ. ಅವರ ದೇಹವನ್ನು ಬೂದಿಯಿಂದ ಮುಚ್ಚಲಾಗಿದೆಯೇ ಹೊರತು ಹಿಮದಿಂದ ಅಲ್ಲ ಎಂದು ದ ಕ್ವಿಂಟ್ ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.