ADVERTISEMENT

ಫ್ಯಾಕ್ಟ್‌ ಚೆಕ್‌: ಪೋಲಿಯೊ ಲಸಿಕೆ-ಆರ್‌ಎಸ್‌ಎಸ್‌, ಸೇವಾಭಾರತಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 16:47 IST
Last Updated 8 ಜೂನ್ 2021, 16:47 IST
ಫ್ಯಾಕ್ಟ್‌ಚೆಕ್‌
ಫ್ಯಾಕ್ಟ್‌ಚೆಕ್‌   

‘ದೇಶದಲ್ಲಿ ಪೋಲಿಯೊ ಲಸಿಕೆ ಹಾಕಿಸುವಲ್ಲಿ ಆರ್‌ಎಸ್‌ಎಸ್‌ ಮತ್ತು ಸೇವಾಭಾರತಿ ಕಾರ್ಯ ಮಹತ್ವದ್ದು’ ಎಂದು ಪೋಸ್ಟ್‌ಕಾರ್ಡ್ ಕನ್ನಡ ತನ್ನ ಫೇಸ್‌ಬುಕ್ ಪುಟದಲ್ಲಿ ಹೇಳಿದೆ. ಈ ಪೋಸ್ಟರ್‌ನಲ್ಲಿ ಔಟ್‌ಲುಕ್ ನಿಯತಕಾಲಿಕದ ಸುದ್ದಿಯೊಂದರ ಸ್ಕ್ರೀನ್‌ಶಾಟ್ ಲಗತ್ತಿಸಿದೆ. ‘ಪೋಲಿಯೊ ನಿರ್ಮೂಲನೆಯಲ್ಲಿ ಆರ್‌ಎಸ್‌ಎಸ್‌ ಮತ್ತು ಸೇವಾ ಭಾರತಿ ಮಹತ್ವದ ಪಾತ್ರವಹಿಸಿವೆ: ವರ್ಧನ್’ ಎಂದು ತಲೆಬರಹ ಆ ಸ್ಕ್ರೀನ್‌ಶಾಟ್‌ನಲ್ಲಿದೆ. 2019ರ ಅಕ್ಟೋಬರ್ 31ರಂದು ಈ ಸುದ್ದಿ ಪ್ರಕಟವಾಗಿದೆ. ಸುದ್ದಿಯ ಮೂಲ ಪಿಟಿಐ ಎಂಬ ವಿವರ ಆ ಸ್ಕ್ರೀನ್‌ಶಾಟ್‌ನಲ್ಲಿದೆ.

ಈ ಸ್ಕ್ರೀನ್‌ಶಾಟ್‌ನಲ್ಲಿ ಇರುವ ವಿವರ ತಪ್ಪಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಆರ್‌ಎಸ್‌ಎಸ್‌ ಮತ್ತು ಸೇವಾಭಾರತಿ ಸಂಘಟನೆಗಳು ಪೋಲಿಯೊ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರವಹಿಸಿವೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಅವರು 2019ರ ಮೇ 19ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಗೂಗಲ್‌ನಲ್ಲಿ ಹುಡುಕಿದಾಗ ಈ ಸುದ್ದಿ ದೊರೆಯುತ್ತಿದೆ. ಔಟ್‌ಲುಕ್ ಜಾಲತಾಣದಲ್ಲೂ ಈ ಸುದ್ದಿ ಲಭ್ಯವಿದೆ. ಪೋಸ್ಟ್‌ಕಾರ್ಡ್‌ ಕನ್ನಡ ಫೇಸ್‌ಬುಕ್ ಪುಟವು ಪೋಸ್ಟ್‌ ಮಾಡಿದ್ದ ಸ್ಕ್ರೀನ್‌ಶಾಟ್‌ನಲ್ಲಿ ಇದ್ದ ಈ ವಿವರ ಸರಿಯಾಗಿಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT