ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನ್ಯೂಯಾರ್ಕ್‌ಗೆ ಭೇಟಿ ನೀಡಿದ ನಂತರ ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರು, ‘ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ವತ್ವ ಪಡೆದಿದ್ದು, ವೀಟೊ ಅಧಿಕಾರವೂ ಸಿಕ್ಕಿದೆ’ ಎಂದು ಹೇಳಿಕೊಳ್ಳುತ್ತಾ, ಪ್ರಧಾನಿ ಮೋದಿ ಅವರ ಎರಡು ವಿಡಿಯೊಗಳನ್ನು ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಭಾರತಕ್ಕೆ ಕಾಯಂ ಸದಸ್ಯತ್ವ ಸಿಕ್ಕಿದೆ ಎನ್ನುವುದು ಸುಳ್ಳು.
ವಿಡಿಯೊ ತುಣುಕನ್ನು ಇನ್‌ವಿಡ್ ಟೂಲ್ ಮೂಲಕ ಹುಡುಕಾಡಿದಾಗ ಹಲವು ಕೀ ಫ್ರೇಮ್‌ಗಳು ಕಂಡು ಬಂದವು. ಒಂದು ಕೀ ಫ್ರೇಮ್ ಅನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಶೋಧ ನಡೆಸಿದಾಗ ಈ ಪೋಸ್ಟನ್ನು ಹಲವರು ‘ಎಕ್ಸ್’ ಮತ್ತು ‘ಫೇಸ್‌ಬುಕ್’ನಲ್ಲಿ ಹಂಚಿಕೊಂಡಿರುವುದು ಗೊತ್ತಾಯಿತು. ವಿಶ್ವ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿದಾಗ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಭದ್ರತಾ ಮಂಡಳಿಯಲ್ಲಿ ಚೀನಾ, ಫ್ರಾನ್ಸ್, ರಷ್ಯಾ ಒಕ್ಕೂಟ, ಬ್ರಿಟನ್ ಮತ್ತು ಅಮೆರಿಕ ಮಾತ್ರ ವೀಟೊ ಅಧಿಕಾರ ಸಹಿತ ಕಾಯಂ ಸದಸ್ಯತ್ವ ಹೊಂದಿವೆ. ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಇನ್ನೂ ಸಿಕ್ಕಿಲ್ಲ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.