ಶ್ರೀಹರಿಕೋಟಾ (ಪಿಟಿಐ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ‘ಭಾರತೀಯ ಪ್ರಾದೇಶಿಕ ಮಾರ್ಗದರ್ಶಿ (ಸಮುದ್ರ ಮತ್ತು ವಾಯು ಸಂಚಾರ ಮಾರ್ಗಕ್ಕೆ ನೆರವು ನೀಡುವ) ಉಪಗ್ರಹ ವ್ಯವಸ್ಥೆ’ ಸರಣಿಯ ಐದನೇ ಉಪಗ್ರಹ ‘ಐಆರ್ಎನ್ಎಸ್ಎಸ್– 1ಇ’ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಇಂದು ಯಶಸ್ವಿಯಾಗಿ ಉಡಾವಣೆಯಾಯಿತು.
ಭಾರತೀಯ ಪ್ರಾದೇಶಿಕ ಸಂಚಾರ ನಿರ್ವಹಣಾ ವ್ಯವಸ್ಥೆ ಉಪಗ್ರಹದ (ಐಆರ್‌ಎನ್‌ಎಸ್‌ಎಸ್) ಯಶಸ್ವಿ ಉಡಾವಣೆಯ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಅಧ್ಯಾಯ ರಚಿಸಿದೆ.
ಉಪಗ್ರಹವನ್ನು ಹೊತ್ತ ಗಗನನೌಕೆ ಪಿಎಸ್‌ಎಲ್‌ವಿ ಬುಧವಾರ ಬೆಳಗ್ಗೆ 9.30ಕ್ಕೆ ಬಾನಿಗೆ ಚಿಮ್ಮಿತು. ಉಡ್ಡಯನದ 19 ನಿಮಿಷಗಳಲ್ಲಿ ಗಗನನೌಕೆ ಯಶಸ್ವಿಯಾಗಿ ಕಕ್ಷೆ ಸೇರಿತು.
ಸಮುದ್ರಯಾನ, ಸಾರಿಗೆ ಸಂಪರ್ಕ ನಿಯಂತ್ರಣ ಮತ್ತಿತರ ಕಾರ್ಯಗಳಿಗೆ ಈ ಉಪಗ್ರಹ ನೆರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.