ಚೆನ್ನೈ: ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಅವರನ್ನು ಆಯ್ಕೆ ಮಾಡಲಾಗಿದೆ.
‘ಅಮ್ಮ’ ಜಯಲಲಿತಾ ನೀಡಿದ್ದ ಸಲಹೆಗಳನ್ನು ನೆನೆದು ‘ಚಿನ್ನಮ್ಮ’ ಶಶಿಕಲಾ ಅವರ ಮುಂದಾಳತ್ವದಲ್ಲಿ ಪಕ್ಷದ ಕಾರ್ಯಕರ್ತರು ನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ.
ಜಯಲಲಿತಾ ಅವರಲ್ಲಿ ಎಂಜಿಆರ್ ಕಂಡಂತೆ, ನಾವು ಅಮ್ಮನನ್ನು ಶಶಿಕಲಾ ಅವರಲ್ಲಿ ಕಾಣುತ್ತೇವೆ ಎಂದು ತಮಿಳುನಾಡು ಸಿಎಂ ಓ.ಪನ್ನೀರ್‌ಸೆಲ್ವಂ ನಿರ್ಣಯದಲ್ಲಿ ತಿಳಿಸಿದರು.
ಶಶಿಕಲಾ ಅವರ ಅನುಪಸ್ಥಿತಿಯಲ್ಲಿ ಪಕ್ಷ ಒಟ್ಟು 12 ನಿರ್ಣಯಗಳನ್ನು ಕೈಗೊಂಡಿದ್ದು, ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ನಿರ್ಣಯ ಪ್ರತಿಯನ್ನು ಶಶಿಕಲಾ ಅವರಿಗೆ ತಲುಪಿಸಲಿದ್ದಾರೆ.
ನಿರ್ಣಯದ ಪ್ರಕಾರ ಶಶಿಕಲಾ ನಟರಾಜನ್ ಅವರು ತಾತ್ಕಾಲಿಕವಾಗಿ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರುತ್ತಾರೆ. ಜಯಲಲಿತಾ ಮತ್ತು ಶಶಿಕಲಾ ಅವರದ್ದು 22 ವರ್ಷಗಳ ಸ್ನೇಹ.
ಪಕ್ಷದ 2,770 ಸದಸ್ಯರು ಭಾಗಿಯಾಗಿದ್ದ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.