ನವದೆಹಲಿ: ಸಾಮಾಜಿಕ ವಲಯಗಳ ಸಮಸ್ಯೆಗಳನ್ನು ಪರಿಹರಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಸಿಕೊಳ್ಳುವ ಕುರಿತು ಪರಿಶೀಲಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀತಿ ಆಯೋಗ ಸೂಚಿಸಿದೆ.
‘2030ರ ವೇಳೆಗೆ ಜಾಗತಿಕ ಜಿಡಿಪಿಗೆ1102.56 ಲಕ್ಷ ಕೋಟಿ ಕೊಡುಗೆ ನೀಡುವ ಸಾಮರ್ಥ್ಯ ಎಐಗೆ ಇದೆ. ವೇಗವಾಗಿ ಬದಲಾಗುತ್ತಿರುವ ಈಗಿನ ಆರ್ಥಿಕತೆಯಲ್ಲಿ ಇದು ಬಹುದೊಡ್ಡ ವಾಣಿಜ್ಯಿಕ ಅವಕಾಶವಾಗಿದೆ’ ಎಂದು ನೀತಿ ಆಯೋಗ ಹೇಳಿದೆ.
‘ಭಾರತ ಎಐ ಅಳವಡಿಸಿಕೊಂಡರೆ 2035ರ ವೇಳೆಗೆ ದೇಶದ ಜಿಡಿಪಿಗೆ ಹೆಚ್ಚುವರಿ ₹ 67.20 ಲಕ್ಷ ಕೋಟಿ ಸೇರಿಸಬಹುದು. ಇದರಿಂದ ದೇಶದ ವಾರ್ಷಿಕ ಆರ್ಥಿಕ ಬೆಳವಣಿಗೆಯನ್ನು ಶೇ 1.3ರಷ್ಟು ಹೆಚ್ಚಿಸಬಹುದು’ ಎನ್ನುವುದು ನೀತಿ ಆಯೋಗದ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.