ಶ್ರೀನಗರ (ಪಿಟಿಐ): ಸಂಸತ್ ಭವನದ ಮೇಲೆ ದಾಳಿ ನಡೆಸಿದ ಕಾರಣ ಮೂರು ವರ್ಷಗಳ ಹಿಂದೆ ಗಲ್ಲಿಗೇರಿಸಲಾಗಿದ್ದ ಉಗ್ರ ಮೊಹಮ್ಮದ್ ಅಫ್ಜಲ್ ಗುರು ಪುತ್ರ ಗಾಲಿಬ್ ಗುರು ಹತ್ತನೇ ತರಗತಿಯಲ್ಲಿ ಶೇ 95 ಅಂಕ ಪಡೆದಿದ್ದಾನೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗಾಲಿಬ್ 500ಕ್ಕೆ 474 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ 19ನೇ ಸ್ಥಾನ ಗಳಿಸಿದ್ದಾನೆ. ಇದೇ ವೇಳೆ ಮಾತನಾಡಿದ ಆತ, ಗಲ್ಲಿಗೇರಿಸುವ ತನಕ ತಂದೆಯ ಅಪರಾಧವೇ ತನಗೆ ತಿಳಿದಿರಲಿಲ್ಲ ಎಂದಿದ್ದಾನೆ.
‘13 ವರ್ಷಗಳ ಕಾಲ ನನಗೆ ನನ್ನ ತಂದೆ ಯಾಕೆ ಜೈಲಿನಲ್ಲಿದ್ದಾರೆ ಎಂಬುದೇ ತಿಳಿದಿರಲಿಲ್ಲ. ಟಿವಿ ಕಾರ್ಯಕ್ರಮಗಳಾದ ‘ಸಿಐಡಿ’ ಮತ್ತು ‘ಕ್ರೈಮ್ ಪಟ್ರೋಲ್’ನಲ್ಲಿ ತೋರಿಸುವಂತೆ ಯಾವುದೋ ವೈಯುಕ್ತಿಕ ಕಾರಣದಿಂದ ಯಾರನ್ನೋ ಕೊಲೆ ಮಾಡಿ ಜೈಲು ಸೇರಿದ್ದಾರೆ ಎಂದು ತಿಳಿದಿದ್ದೆ’ ಎಂದು ಗಾಲಿಬ್ ಗುರು ತಿಳಿಸಿದ್ದಾನೆ.
ತನ್ನ ತಂದೆಯನ್ನು ಸಂಸತ್ ಭವನ ದಾಳಿ ಅಪರಾಧದಲ್ಲಿ ನೇಣಿಗೇರಿಲಾಗಿದೆ ಎಂಬ ವಿಚಾರ ಮಾಧ್ಯಮಗಳಿಂದ ತಿಳಿಯಿತು ಎಂದು ಗಾಲಿಬ್ ಹೇಳಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.