ADVERTISEMENT

ಗಡಿ ನಿಯಂತ್ರಣ ರೇಖೆ ಸೈನ್ಯದ ಹಿಡಿತದಲ್ಲಿದೆ : ಬಿಕ್ರಂ ಸಿಂಗ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2013, 10:33 IST
Last Updated 18 ಜನವರಿ 2013, 10:33 IST
ಭೂಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್
ಭೂಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್   

ಭೋಪಾಲ್, (ಐಎಎನ್ಎಸ್):  ಜನವರಿ 8 ರಂದು ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್‌ನ ಸೋನಾ ಗಾಲಿ ಪ್ರದೇಶದಲ್ಲಿ ಪಾಕಿಸ್ತಾನದ ಸೈನಿಕರ ದಾಳಿಯಲ್ಲಿ  ಮೃತರಾದ ಭಾರತದ ಇಬ್ಬರು ಸೈನಿಕರಲ್ಲಿ ಒಬ್ಬರಾದ  ಸುಧಾಕರ್ ಸಿಂಗ್  ಕುಟುಂಬಕ್ಕೆ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್ ಅವರು ಹಣಕಾಸು ಸಹಾಯ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದರು.

ಸದ್ಯದ ಸ್ಥಿತಿಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಸೈನ್ಯದ ಹಿಡಿತದಲ್ಲಿದೆ  ಎಂದು ಅವರು ತಿಳಿಸಿದರು.

ಈಗಾಗಲೇ ಮೃತನ ಕುಟುಂಬಕ್ಕೆ ರೂ 42 ಲಕ್ಷ ಸಹಾಯ ಧನವನ್ನು ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗಿದೆ, ಅಲ್ಲದೆ ಅವರ ತಂದೆಯವರಗೆ ಪತ್ರದ ಮುಖಾಂತರ ಕುಟುಂಬದ ಒಬ್ಬರಿಗೆ ನೌಕರಿ ನೀಡುವ ಕುರಿತು ತಿಳಿಸಲಾಗಿದೆ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.