ಅಹಮದಾಬಾದ್ (ಪಿಟಿಐ): ಹಿರಿಯ ಗಾಂಧಿವಾದಿ ಮತ್ತು ಗುಜರಾತ್ ವಿದ್ಯಾಪೀಠದ ವಿಶ್ರಾಂತ ಕುಲಪತಿ ನಾರಾಯಣ ದೇಸಾಯಿ (90) ಭಾನುವಾರ ಸೂರತ್ ಖಾಸಗಿ ಆಸ್ಪತ್ರೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಕೊನೆಯುಸಿರೆಳೆದರು. ಕಳೆದ ಡಿಸೆಂಬರ್‌ನಿಂದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಅವರಿಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ದೇಸಾಯಿ ಅವರ ತಂದೆ ಮಹಾದೇವ್ ದೇಸಾಯಿ ಅವರು ಮಹಾತ್ಮ ಗಾಂಧಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಗಾಂಧೀಜಿ ಅವರ ದಿನಚರಿಯನ್ನೂ ಬರೆಯುತ್ತಿದ್ದರು.
ದೇಸಾಯಿ ತಮ್ಮ ಬಾಲ್ಯದ ದಿನಗಳವನ್ನು ಸಬರಮತಿ ಆಶ್ರಮದಲ್ಲಿ ಕಳೆದಿದ್ದರು. ಜಯಪ್ರಕಾಶ್ ನಾರಾಯಣ ಅವರಿಂದಲೂ ದೇಸಾಯಿ ಪ್ರಭಾವಿತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.