ನವದೆಹಲಿ (ಪಿಟಿಐ): 30 ಕೋಟಿ ಜನರನ್ನು ಆನ್‌ಲೈನ್ ಬಳಕೆದಾರರನ್ನಾಗಿ ಮಾಡಬೇಕೆಂಬ ಆಶಯದೊಂದಿಗೆ ಅಂತರ್ಜಾಲದ ದೈತ್ಯ ಗೂಗಲ್ ಕಂಪೆನಿ ವಾಯ್ಸ್ ಸರ್ಚ್(ಧ್ವನಿ ಮೂಲಕ ಹುಡುಕಾಟ) ಸೇವೆಯನ್ನು ಪ್ರಾದೇಶಿಕ ಭಾಷೆಯಾದ ಹಿಂದಿಗೂ ವಿಸ್ತರಿಸಿದೆ.
ಪ್ರಾದೇಶಿಕ ಭಾಷೆಗಳನ್ನು ಅಂತರ್ಜಾಲದಲ್ಲಿ ದೊರಕಿಸಿಕೊಡುವ ನಿಟ್ಟಿನಲ್ಲಿ ಗೂಗಲ್, ಎಬಿಪಿ ಸುದ್ದಿವಾಹಿನಿ, ಅಮರ್ ಉಜಾಲ್ ದಿನ ಪತ್ರಿಕೆ ಮತ್ತು ಸರ್ಕಾರಿ ಸಂಸ್ಥೆ ಸಿಡಿಎಸಿಯೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಸದ್ಯ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿರುವ ವಾಯ್ಸ್ ಸರ್ಚ್‌ಅನ್ನು ಇತರ ಪ್ರಾದೇಶಿಕ ಭಾಷೆಗಳಾದ ತಮಿಳು, ಮರಾಠಿ ಮತ್ತು ಬಂಗಾಳಿ ಭಾಷೆಗಳನ್ನು ಸೇರ್ಪಡೆಗೊಳಿಸುವ ಯೋಜನೆಯನ್ನು ಗೂಗಲ್ ಹೊಂದಿದೆ.
ಸದ್ಯ ಭಾರತದಲ್ಲಿ 20 ಕೋಟಿ ಅಂತರ್ಜಾಲ ಬಳಕೆದಾರರಿದ್ದಾರೆ. ಪ್ರತಿ ತಿಂಗಳು 50 ಲಕ್ಷ ಜನರು ಇದಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.