ಅಹಮದಾಬಾದ್ (ಪಿಟಿಐ): 2002ರ ಫೆಬ್ರುವರಿಯಲ್ಲಿ ಗೋಧ್ರಾ ರೈಲು ಹತ್ಯಾಕಾಂಡದ ನಂತರ ನಡೆದ ಪ್ರಮುಖ ಘಟನಾವಳಿಗಳು ಈ ಕೆಳಗಿನಂತಿವೆ.
2002 ಫೆ. 27: ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರಿಂದ 59 ಕರಸೇವಕರ ಸಜೀವ ದಹನ.
ಫೆ. 28- ಮಾರ್ಚ್ 31: ಗುಜರಾತ್‌ನ ಅನೇಕ ಕಡೆಗಳಲ್ಲಿ ಕೋಮು ಗಲಭೆ, 1,200 ಮಂದಿಯ ಹತ್ಯೆ. ಸತ್ತವರಲ್ಲಿ ಬಹುತೇಕರು ಮುಸ್ಲಿಮರು.
ಮಾರ್ಚ್ 3: ರೈಲು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಂಧಿಸಿದವರ ಮೇಲೆ ‘ಪೋಟಾ’ ಕಾಯ್ದೆ ಹೇರಿಕೆ.
ಮಾರ್ಚ್ 6: ಗೋಧ್ರಾ ಹತ್ಯಾಕಾಂಡ ಮತ್ತು ನಂತರ ನಡೆದ ಕೋಮು ಗಲಭೆಗಳ ತನಿಖೆಗೆ ವಿಚಾರಣಾ ಆಯೋಗದ ನೇಮಕ.
ಮಾರ್ಚ್ 9: ಬಂಧಿತರ ವಿರುದ್ಧ ಐಪಿಸಿ ಕಲಂ 120 ಬಿ ಪ್ರಕಾರ ಕ್ರಿಮಿನಲ್ ಸಂಚಿನ ಆರೋಪ.
ಮಾರ್ಚ್ 27: ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು, ಬಂಧಿತರ ವಿರುದ್ಧ ಹೇರಲಾಗಿದ್ದ ‘ಪೋಟಾ’ ರದ್ದು.
ಮೇ 27- 54: ಜನರ ವಿರುದ್ಧ ಮೊದಲ ದೋಷಾರೋಪ ಪಟ್ಟಿ ಸಲ್ಲಿಕೆ.
2003, ಫೆ. 18: ಬಿಜೆಪಿ ರಾಜ್ಯದಲ್ಲಿ ಪುನಃ ಆಯ್ಕೆಯಾದ ಬಳಿಕ ಬಂಧಿತರ ವಿರುದ್ಧ ಮತ್ತೆ ‘ಪೋಟಾ’ ಹೇರಿಕೆ.
2003, ನ. 21: ಗೋಧ್ರಾ ಹತ್ಯಾಕಾಂಡ ಸೇರಿದಂತೆ ಎಲ್ಲ ಕೋಮು ಗಲಭೆಗಳ ನ್ಯಾಯಾಂಗ ವಿಚಾರಣೆ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ತಡೆ.
2004, ಸೆ. 4: ಲಾಲು ಪ್ರಸಾದ ರೈಲ್ವೆ ಸಚಿವರಾಗಿದ್ದಾಗ ಗೋದ್ರಾ ಘಟನೆಯ ತನಿಖೆಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಯು. ಸಿ. ಬ್ಯಾನರ್ಜಿ ಸಮಿತಿ ನೇಮಕ.
2004, ಸೆ. 21: ಕೇಂದ್ರದ ಯುಪಿಎ ಸರ್ಕಾರ ಪೋಟಾ ರದ್ದುಪಡಿಸಿದ್ದರಿಂದ ಗೋದ್ರಾ ಬಂಧಿತರ ವಿರುದ್ಧ ಪೋಟಾ ಕಾಯ್ದೆಯಡಿ ಹೂಡಲಾಗಿದ್ದ ಪ್ರಕರಣ ರದ್ದಿಗೆ ಪರಿಶೀಲನೆ.
2005, ಜ. 17: ಯು. ಸಿ.ಬ್ಯಾನರ್ಜಿ ಸಮಿತಿಯಿಂದ ಪ್ರಾಥಮಿಕ ವರದಿ ಸಲ್ಲಿಕೆ. ಎಸ್-6 ಬೋಗಿಯಲ್ಲಯೇ ಬೆಂಕಿ ಆಕಸ್ಮಿಕ ಎಂಬ ಅಭಿಪ್ರಾಯ ನೀಡಿಕೆ.
2005, ಮೇ 16: ಆಪಾದಿತರ ವಿರುದ್ಧ ಪೋಟಾ ಕಾಯ್ದೆಯಡಿ ಪ್ರಕರಣ ದಾಖಲಿಸದಂತೆ ಪೋಟಾ ಪುನರ್ವಿಮರ್ಶಾ ಸಮಿತಿಯ ಸಲಹೆ.
2006, ಅ. 13: ನಾನಾವತಿ ಆಯೋಗವು ಎಲ್ಲ ಗಲಭೆಗಳ ವಿಚಾರಣೆ ನಡೆಸುತ್ತಿರುವುದರಿಂದ ಬ್ಯಾನರ್ಜಿ ಸಮಿತಿ ರಚನೆ ಕಾನೂನು ಮತ್ತು ಸಂವಿಧಾನ ಬಾಹಿರ ಹಾಗೂ ಈ ಸಮಿತಿಯ ಪ್ರಾಥಮಿಕ ವರದಿಗೆ ಬೆಲೆ ಇಲ್ಲ ಎಂದು ಗುಜರಾತ್ ಹೈಕೋರ್ಟ್ ತೀರ್ಪು.
2008, ಮಾರ್ಚ್ 26: ಗೋದ್ರಾ ಹತ್ಯಾಕಾಂಡ ಮತ್ತು ಇತರ ಎಂಟು ಕೋಮು ಗಲಭೆಗಳ ತನಿಖಗೆ ಸುಪ್ರೀಂಕೋರ್ಟ್‌ನಿಂದ ವಿಶೇಷ ತನಿಖಾ ತಂಡ ರಚನೆ.
2008, ಸೆ. 18: ನಾನಾವತಿ ಆಯೋಗದ ವರದಿ ಸಲ್ಲಿಕೆ. ಪೂರ್ವ ಯೋಜಿತ ಸಂಚಿನಿಂದ ನಡೆದ ಕೃತ್ಯ, ಪೆಟ್ರೋಲ್ ಸುರಿದು ಬೋಗಿಗೆ ಬೆಂಕಿ ಹಚ್ಚಲಾಗಿದೆ ಎಂಬ ಅಂಶವನ್ನು ಒಳಗೊಂಡ ವರದಿ.
2009, ಫೆ. 12: ಪೋಟಾ ಪುನರ್ವಿಮರ್ಶಾ ಸಮಿತಿಯ ಸಲಹೆಗೆ ಹೈಕೋರ್ಟ್ ಮಾನ್ಯತೆ.
2009, ಫೆ. 20: ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗೋದ್ರಾ ಸಂತ್ರಸ್ತರಿಂದ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ. (ಇನ್ನೂ ವಿಚಾರಣೆ ನಡೆಯುತ್ತಿದೆ).
2009, ಮೇ 1: ಗೋದ್ರಾ ಹತ್ಯಾಕಾಂಡ ಮತ್ತು ಇತರ ಕೋಮು ಗಲಭೆ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂಕೋರ್ಟ್.
2009, ಜೂನ್ 1: ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಗೋದ್ರಾ ಹತ್ಯಾಕಾಂಡ ವಿಚಾರಣೆ ಪುನರಾರಂಭ.
2010, ಮೇ 6: ಗೋದ್ರಾ ಹತ್ಯಾಕಾಂಡ ಪ್ರಕರಣ ಸೇರಿದಂತೆ 9 ಕೋಮು ಗಲಭೆ ಪ್ರಕರಣದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ.
2010, ಸೆ. 28: ವಿಚಾರಣೆ ಮುಕ್ತಾಯ. ತಡೆಯಾಜ್ಞೆ ಇದ್ದುದರಿಂದ ತೀರ್ಪು ಪ್ರಕಟನೆ ಮುಂದಕ್ಕೆ.
2011, ಜ. 18: ಸುಪ್ರೀಂಕೋರ್ಟ್‌ನಿಂದ ತಡೆಯಾಜ್ಞೆ ತೆರವು.
2011, ಫೆ. 22: ವಿಶೇಷ ತ್ವರಿತ ನ್ಯಾಯಾಲಯದಿಂದ ತೀರ್ಪು ಪ್ರಕಟ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.