ಲಖನೌ/ಆಗ್ರಾ (ಪಿಟಿಐ): ನಿಷ್ಕಲ್ಮಷ ಪ್ರೀತಿ, ಪ್ರೇಮದ ಸಂಕೇತದಂತಿರುವ 17ನೇ ಶತಮಾನದ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಹೆಸರಲ್ಲಿ ಇದೇ ಮೊದಲ ಬಾರಿಗೆ ಶನಿವಾರ ಟ್ವಿಟರ್ ಖಾತೆ ತೆರೆಯಲಾಗಿದೆ. ಇದರೊಂದಿಗೆ ಟ್ವಿಟರ್ ಪ್ರವೇಶಿಸಿದ ವಿಶ್ವದ ಮೊದಲ ಸ್ಮಾರಕ ಎಂಬ ಹೆಗ್ಗಳಿಕೆಗೆ ತಾಜ್ ಪಾತ್ರವಾಗಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶನಿವಾರ ತಾಜ್ ಟ್ವಿಟರ್ ಖಾತೆಯನ್ನು (@Taj Mahal) ಬಿಡುಗಡೆ ಮಾಡಿದರು. ಟ್ವಿಟರ್ ಖಾತೆ ಬಿಡುಗಡೆಯಾದ ತಾಸಿನಲ್ಲಿಯೇ ತಾಜ್ ಖಾತೆಯನ್ನು 2000 ಮಂದಿ ಹಿಂಬಾಲಿಸಿದ್ದಾರೆ.
ತಮ್ಮ ಪತ್ನಿ, ಪುತ್ರನೊಂದಿಗೆ ತಾಜ್ ಮಹಲ್‌ನಲ್ಲಿ ತೆಗೆಸಿಕೊಂಡಿದ್ದ ಹಳೆಯ ಚಿತ್ರವನ್ನು ಅಖಿಲೇಶ್ #MyTajMemory ಪ್ರಕಟಿಸಿದರು. ಇದರ ಬೆನ್ನಲ್ಲೇ ಅನೇಕರು ತಮ್ಮ ತಾಜ್ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.