ನವದೆಹಲಿ: ಪೂಜಾ ಬಿಜರ್ನಿಯಾ ಎಂಬ ಯುವತಿ ಯಕೃತ್ತು ವೈಫಲ್ಯದಿಂದ ಬಳಲುತ್ತಿದ್ದ ತಮ್ಮ ತಂದೆಗೆ ಯಕೃತ್ತು ದಾನ ಮಾಡಿದ್ದು, ಈಕೆಯ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಶಸ್ತ್ರಚಿಕಿತ್ಸೆಯ ಬಳಿಕ ತಂದೆಯೊಂದಿಗೆ ಪೂಜಾ ಬಿಜರ್ನಿಯಾ ಇರುವ ಫೋಟೋವನ್ನು ವೈದ್ಯ ರಚಿತ್ ಭೂಷನ್ ಶ್ರೀವಾಸ್ತವ ಅವರು ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡು ವಿವರಿಸಿದ್ದಾರೆ.
‘ನಿತ್ಯದ ಬದುಕಿನಲ್ಲಿ ಕೆಲ ನಂಬಲಾಗದ ಹೀರೋಗಳು ಕಾಣಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳ ಬಗ್ಗೆ ಅಸಡ್ಡೆ ತೋರುವವರಿಗೆ ಹೆಣ್ಣು ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟ ಈ ಯುವತಿ ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ಆದರೂ ತಂದೆಗೆ ತನ್ನ ಯಕೃತ್ತು ದಾನ ಮಾಡಿ ಜೀವ ಉಳಿಸಿದ ಕಾರಣಕ್ಕೆ ಈಕೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈಕೆ ಸಮಾಜದಲ್ಲಿ ಇತರರಿಗೆ ಸ್ಫೂರ್ತಿಯಾಗಿದ್ದಾಳೆ. ಈಕೆಗೆ ದೇವರು ಒಳ್ಳೆಯದನ್ನು ಮಾಡಲಿ’ ಎಂದಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ 10 ಸಾವಿರಕ್ಕೂ ಹೆಚ್ಚು ಹಂಚಿಕೆಯಾಗಿದ್ದು, ಯುವತಿಯ ಬಗ್ಗೆ ನೆಟಿಜನ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.