ನವದೆಹಲಿ (ಐಎಎನ್ಎಸ್): ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ನಿಖರವಾಗಿ ಅಂದಾಜಿಸುವಲ್ಲಿ ಎಡವಿದ ಟುಡೇಸ್ ಚಾಣಕ್ಯ ಭಾನುವಾರ ಕ್ಷಮೆಯಾಚಿಸಿದೆ.
‘ಬಿಹಾರ ಚುನಾವಣೆಯ ನಿಖರ ಫಲಿತಾಂಶ ಭವಿಷ್ಯ ನುಡಿಯುವಲ್ಲಿ ಸಾಧ್ಯವಾಗದ್ದಕ್ಕೆ ಸ್ನೇಹಿತರು ಹಾಗೂ ಹಿತಚಿಂತಕರಲ್ಲಿ ಪ್ರಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಗೆಲುವಿನ ಮೈತ್ರಿಕೂಟಕ್ಕೆ ಅಭಿನಂದನೆಗಳು’ ಎಂದು ಟುಡೇಸ್ ಚಾಣಕ್ಯ ಟ್ವೀಟ್ ಮಾಡಿದೆ.
ಬಿಜೆಪಿ ನೇತೃತ್ವದ ಕೂಟಕ್ಕೆ 155 ಸೀಟುಗಳು, ಜೆಡಿಯು ನೇತೃತ್ವದ ಮಹಾಮೈತ್ರಿಕೂಟಕ್ಕೆ 83 ಸ್ಥಾನಗಳು ದೊರೆಯುವ ಸಾಧತ್ಯೆಗಳಿವೆ ಎಂದು ಟುಡೇಸ್ ಚಾಣಕ್ಯ ಮತಗಟ್ಟೆ ಸಮೀಕ್ಷೆಯಿಂದ ಅಂದಾಜಿಸಿತ್ತು.
ಆದರೆ, ಬಿಹಾರ ವಿಧಾನಸಭೆಗೆ ಐದು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶದಲ್ಲಿ ಜೆಡಿಯು ನೇತೃತ್ವದ ಬಹುಮತ ಸರಳ ಬಹುಮತದತ್ತ ದಾಪುಗಾಲಿಟ್ಟ ಬೆನ್ನಲ್ಲಿಯೇ ಟುಡೇಸ್ ಚಾಣಕ್ಯ ಕ್ಷಮೆ ಕೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.