ಹೈದರಾಬಾದ್ (ಪಿಟಿಐ): ನಾಲ್ವರು ದಲಿತ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದ ಆದೇಶವನ್ನು ಹೈದರಾಬಾದ್ ವಿಶ್ವವಿದ್ಯಾಲಯ ಗುರುವಾರ ರದ್ದುಪಡಿಸಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದ ರೋಹಿತ್ ಜತೆಯಲ್ಲಿ ಈ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ನಂತರದ ಬೆಳವಣಿಗೆಗಳಲ್ಲಿ ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಶೇಷಯ್ಯ, ವಿಜಯಕುಮಾರ್, ಪ್ರಶಾಂತ್, ಸುಂಕಣ್ಣ ಅವರ ವಿರುದ್ಧದ ಆದೇಶವನ್ನು ವಿಶ್ವವಿದ್ಯಾಲಯ ಹಿಂಪಡೆದಿದೆ. ಈ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಗ್ರಂಥಾಲಯ ಸೌಲಭ್ಯವನ್ನು ನೀಡಿರಲಿಲ್ಲ.
ರಾಜಿನಾಮೆ?: ರೋಹಿತ್ ಹತ್ಯೆ ಖಂಡಿಸಿ ವಿಶ್ವವಿದ್ಯಾಲಯದ 10 ಕ್ಕೂ ಹೆಚ್ಚು ಅಧ್ಯಾಪಕರು ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಮುಷ್ಕರ ಮುಂದುವರೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.