ADVERTISEMENT

ಪತಂಜಲಿಯಿಂದ 'ಸ್ವದೇಶಿ ಸಮೃದ್ಧಿ' ಸಿಮ್ ಕಾರ್ಡ್ ಲೋಕಾರ್ಪಣೆ

ಏಜೆನ್ಸೀಸ್
Published 29 ಮೇ 2018, 4:21 IST
Last Updated 29 ಮೇ 2018, 4:21 IST
ಕೃಪೆ:ಎಎನ್‍ಐ
ಕೃಪೆ:ಎಎನ್‍ಐ   

ನವದೆಹಲಿ: ಗೃಹೋಪಯೋಗಿ ವಸ್ತುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ಪತಂಜಲ ಈಗ ಟೆಲಿಕಾಂ ವಿಭಾಗಕ್ಕೆ ಪಾದಾರ್ಪಣೆ ಮಾಡಿದೆ.
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪತಂಜಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‍ಎನ್‍ಎಲ್ ) ಸಹಭಾಗಿತ್ವದೊಂದಿಗೆ ಸ್ವದೇಶಿ ಸಮೃದ್ಧಿ ಸಿಮ್‌ ಕಾರ್ಡ್‌ ಲೋಕಾರ್ಪಣೆ ಮಾಡಿದ್ದು, ಆಕರ್ಷಕ ಆಫರ್‌ಗಳನ್ನು ಪರಿಚಯಿಸಿದೆ.

ಆರಂಭದಲ್ಲಿ ಪತಂಜಲಿ ಕಂಪನಿಯ ನೌಕರರಿಗೆ ಮಾತ್ರ ಈ ಸಿಮ್ ಕಾರ್ಡ್ ಲಭ್ಯವಿದ್ದು ಸ್ವದೇಶಿ ಸಮೃದ್ಧಿ ಸಿಮ್‌ ಕಾರ್ಡ್‌ ಹೊಂದಿರುವರಿಗೆ ಪತಂಜಲಿ ಉತ್ಪನ್ನಗಳಲ್ಲಿ ಶೇ.10 ರಿಯಾಯಿತಿ ಸಿಗಲಿದೆ.

₹144ಗೆ 2ಜಿಬಿ ಡೇಟಾ 100 ಎಸ್‌ಎಂಎಸ್‌ಗಳು ಮತ್ತು ರಾಷ್ಟ್ರದಾದ್ಯಂತ ಅನಿಯಮಿತ ಕರೆಗಳನ್ನು ಮಾಡುವ ಆಫರ್‍ ನೀಲಾಗಿದೆ .ಇದಲ್ಲದೆ ಸಿಮ್‌ ಕಾರ್ಡ್‌ ಜತೆ ಅಫಘಾತ ವಿಮೆ, ₹2.5 ಲಕ್ಷ . ವರೆಗೆ ವೈದ್ಯಕೀಯ ಆರೋಗ್ಯ ವಿಮೆ ಹಾಗೂ 5 ಲಕ್ಷ ರೂ. ವರೆಗೆ ಜೀವ ವಿಮೆಯನ್ನು ಅಳವಡಿಸಲಾಗಿದೆ.

ADVERTISEMENT

ಸಿಮ್ ಕಾರ್ಡ್ ಲೋಕಾರ್ಪಣೆ ಮಾಡಿದ ನಂತರ ಸುದ್ದಿಗಾರರೊಡನೆ ಮಾತನಾಡಿದ ರಾಮ್‍ದೇವ್,  ಬಿಎಸ್‍ಎನ್‍ಎನ್ ಸ್ವದೇಶಿ ನೆಟ್‍ವರ್ಕ್ ಆಗಿದ್ದು, ದೇಶದ ಅಭಿವೃದ್ದಿಗಾಗಿ ಪತಂಜಲಿ ಮತ್ತು ಬಿಎಸ್‍ಎನ್‍ಎಲ್ ಶ್ರಮಿಸುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.