ಕೊಲ್ಕತ್ತಾ: ಪಶ್ಚಿಮ ಬಂಗಾಳದ ಏಳು ಪುರಸಭೆಗಳಿಗೆ ನಡೆದಿದ್ದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷ ಮೈಲುಗೈ ಸಾಧಿಸಿದ್ದು, ಏಳೂ ಪುರಸಭೆಗಳಲ್ಲಿಯೂ ಗೆದ್ದು ವಿಜಯೋತ್ಸವ ಆಚರಿಸಿದೆ.
ಧುಪ್ಗುರಿ, ಹಲ್ದಿಯಾ, ಪಾನ್‌ಸ್ಕುರ, ದುರ್ಗಾಪುರ, ಕೂಪರ್ಸ್ ಕ್ಯಾಂಪ್, ನಲ್ಹತಿ ಹಾಗೂ ಬುನಿಯಾದ್‌ಪುರ ಪುರಸಭೆಗಳ 148 ವಾರ್ಡ್‌ಗಳಿಗೆ ಆಗಸ್ಟ್ 13ರಂದು ಚುನಾವಣೆ ನಡೆದಿತ್ತು.
ಒಟ್ಟು ಸ್ಥಾನಗಳ ಪೈಕಿ 140ರಲ್ಲಿ ಟಿಪಿಎಂ ಗೆಲುವು ಸಾಧಿಸಿದ್ದರೆ, ಆರು ವಾರ್ಡ್‌ಗಳಲ್ಲಿ ಜಯ ಗಳಿಸಿರುವ ಬಿಜೆಪಿ ಎರಡನೇ ಸ್ಥಾನ ಪಡೆದುಕೊಂಡಿದೆ. ಉಳಿದ ಎರಡರಲ್ಲಿ ಒಂದು ವಾರ್ಡ್ ಫಾರ್ವರ್ಡ್ ಬ್ಲಾಕ್ ಅಭ್ಯರ್ಥಿಗೆ ಒಲಿದಿದ್ದು, ಇನ್ನೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ(ಸಿಪಿಐ–ಎಂ) ಒಂದೂ ವಾರ್ಡ್‌ನಲ್ಲಿ ಗೆಲುವು ಸಾಧಿಸಿಲ್ಲ. ‘ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಜನರು ಒಪ್ಪಿಕೊಂಡಿಲ್ಲ’ ಎಂದು ಫಾರ್ವರ್ಡ್ ಬ್ಲಾಕ್ ಪಕ್ಷದ ಕಾರ್ಯದರ್ಶಿ ನರೇನ್ ಚಟರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.