ನವದೆಹಲಿ (ಪಿಟಿಐ): ಹಿಂದಿನ ಹಣಕಾಸು ಸಚಿವರ ಪರಂಪರೆ ಮುಂದುವರಿಸಿರುವ ಪ್ರಸಕ್ತ ಹಣಕಾಸು ಸಚಿವ ಅರುಣ್ ಜೇಟ್ಲಿ, ಎಂದಿನಂತೆ ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳು ಮೇಲಿನ ಸೇವಾ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಶ್ರೀಸಾಮಾನ್ಯರ ಮೇಲೆ ಅಲ್ಪ ಮಟ್ಟಿಗೆ ಕರುಣೆ ತೋರಿರುವ ಅವರು, ಹೋಟೆಲ್ ಊಟ, ವಿಮಾನ ಯಾನ ಸೇರಿದಂತೆ ಹಲವು ವಸ್ತುಗಳ ಮೇಲಿನ ಸೇವಾ ತೆರಿಗೆ ಏರಿಕೆ ಮಾಡಿದ್ದಾರೆ.
ಯಾವುದು ತುಟ್ಟಿ?
* ಸಿಗರೇಟು ಹಾಗೂ ಇತರ ತಂಬಾಕು ಉತ್ಪನ್ನಗಳು
* ಸಂಪೂರ್ಣ ಸಿದ್ಧಗೊಂಡ ವಿದೇಶಿ ವಾಣಿಜ್ಯ ವಾಹನಗಳು
* ಸಿಮೆಂಟ್
* ವಿವಿಧ ಬಗೆಯ ಪಾನೀಯಗಳು ಹಾಗೂ ಪ್ಯಾಕಿಂಗ್ ಮಾಡಿದ ನೀರು
* ಪ್ಲ್ಯಾಸ್ಟಿಕ್ ಚೀಲಗಳು ಹಾಗೂ ಕಾಲುಚೀಲಗಳು
* ಬಿಸಿನೆಸ್ ಹಾಗೂ ಎಕ್ಸಿಕ್ಯೂಟಿವ್ ದರ್ಜೆಯ ವಿಮಾನಯಾನ
* ಅಮ್ಯೂಜಮೆಂಟ್ ಹಾಗೂ ಥೀಮ್ ಪಾರ್ಕ್
* ಸಂಗೀತ ಗೋಷ್ಠಿಗಳು
* ಮದ್ಯ, ಚಿಟ್ ಫಂಡ್ ಹಾಗೂ ಲಾಟರಿ
ಯಾವುದು ಅಗ್ಗ?
* 1 ಸಾವಿರಕ್ಕೂ ಮೇಲ್ಪಟ್ಟ ಚರ್ಮದ ಪಾದರಕ್ಷೆ
*ಸ್ಥಳೀಯವಾಗಿ ನಿರ್ಮಾಣಗೊಂಡ ಮೊಬೈಲ್ ಫೋನ್
* ಎಲ್ಇಡಿ/ಎಲ್ ಸಿಡಿ ಪರದೆಗಳು
* ಎಲ್ಇಡಿ ಲೈಟ್ಸ್ ಹಾಗೂ ಎಲ್ಇಡಿ ಲ್ಯಾಂಪ್ಸ್
* ಸೌರ ಆಧಾರಿತ ನೀರು ಬಿಸಿ ಮಾಡುವ ಸಾಧನ
* ಪ್ರಸಾಧನ ಸಾಮಗ್ರಿಗಳು
* ಆಂಬುಲೆನ್ಸ್ ಹಾಗೂ ಆಂಬುಲೆನ್ಸ್ ಸೇವೆಗಳು
* ಟ್ಯಾಬ್ಲೆಟ್
* ಅಗರಬತ್ತಿ
* ಮೈಕ್ರೋ ಅವೆನ್
* ಫಿಡ್ಜ್
* ಕಡಲೇ ಬೆಣ್ಣೆ, ಪ್ಯಾಕ್ ಮಾಡಿದ ಹಣ್ಣು ಹಾಗೂ ತರಕಾರಿಗಳು
* ಮ್ಯೂಸಿಯಂ, ಪ್ರಾಣಿ ಸಂಗ್ರಹಾಲಯಗಳು,ರಾಷ್ಟ್ರೀಯ ಉದ್ಯಾನಗಳ ಭೇಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.