ADVERTISEMENT

ಬಿಹಾರದಲ್ಲಿ ನಿತೀಶ್‌– ಬಿಜೆಪಿ ಸರ್ಕಾರ್‌!

ಮುರಿದ ಮಹಾ ಮೈತ್ರಿ

ಏಜೆನ್ಸೀಸ್
Published 26 ಜುಲೈ 2017, 17:38 IST
Last Updated 26 ಜುಲೈ 2017, 17:38 IST
ಬಿಹಾರದಲ್ಲಿ ನಿತೀಶ್‌– ಬಿಜೆಪಿ ಸರ್ಕಾರ್‌!
ಬಿಹಾರದಲ್ಲಿ ನಿತೀಶ್‌– ಬಿಜೆಪಿ ಸರ್ಕಾರ್‌!   

ಪಟ್ನಾ: ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಸರ್ಕಾರ ರಚನೆಗೆ ಬಿಜೆಪಿ ಪಕ್ಷವು ಜೆಡಿಯು ಜತೆಗೆ ಕೈ ಜೋಡಿಸಿದೆ.

ನಿತೀಶ್‌ ಕುಮಾರ್‌ ನಿವಾಸದಲ್ಲಿ ಸಭೆ ನಡೆಸಿದ ಬಿಜೆಪಿ ಮತ್ತು ಜೆಡಿಯು ಶಾಸಕರು ನಿತೀಶ್‌ ಅವರನ್ನು ತಮ್ಮ ನಾಯಕ ಎಂದು ಘೋಷಿಸಿದ್ದಾರೆ

‘ನಿತೀಶ್ ನೇತೃತ್ವದ ಹೊಸ ಸರ್ಕಾರ ರಚನೆಗೆ ಬಿಜೆಪಿ ಬೆಂಬಲಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದೆ’ ಎಂದು ಬಿಜೆಪಿಯ ಸುಶೀಲ್‌ ಮೋದಿ ತಿಳಿಸಿದ್ದಾರೆ.

ADVERTISEMENT

ಹೊಸ ಸರ್ಕಾರದಲ್ಲಿ ಸುಶೀಲ್‌ ಮೋದಿ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ತಮ್ಮ ಪುತ್ರ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ತೇಜಸ್ವಿ ಯಾದವ್ ಅವರ ತಂದೆ ಆರ್‌‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳಿದ್ದರು. ಆರ್‍‌ಜೆಡಿ ಮತ್ತು ಜೆಡಿಯು ನಡುವಿನ ಒಡಕಿನಿಂದಾಗಿ ನಿತೀಶ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಕಡಿದುಕೊಂಡಿದ್ದಾರೆ.

ಒಟ್ಟು 243 ಸ್ಥಾನವಿರುವ ಬಿಹಾರ ವಿಧಾನಸಭೆಯಲ್ಲಿ ಜೆಡಿಯು ಪಕ್ಷದ 71, ಬಿಜೆಪಿಯ 53 ಮತ್ತು ಬಿಜೆಪಿ ಮಿತ್ರಪಕ್ಷ ಎಲ್‍ಜೆಪಿಯ 2 ಸ್ಥಾನಗಳು ಸೇರಿ ಒಟ್ಟು 126 ಸದಸ್ಯ ಬಲದೊಂದಿಗೆ ನಿತೀಶ್‌ ಕುಮಾರ್‌ ಅವರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

2015ರಲ್ಲಿ ನಡೆದ ಚುನಾವಣೆಯಲ್ಲಿ ಆರ್‍‍ಜೆಡಿ (80),  ಜೆಡಿಯು (71) , ಬಿಜೆಪಿ (53), ಕಾಂಗ್ರೆಸ್(27), ಲೋಕಜನಶಕ್ತಿ (ಎಲ್‍ಜೆಪಿ) (2) ಆರ್‍ಎಲ್‍ಎಸ್‍ಪಿ (2) ಎಚ್‍ಎಎಂ (1) ಸಿಪಿಐ (ಎಂಎಲ್) ಲಿಬರೇಷನ್  (3), ಸ್ವತಂತ್ರ (4) ಸ್ಥಾನಗಳನ್ನು ಗಳಿಸಿವೆ.

ಇದನ್ನೂ ಓದಿ...
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.