ನವದೆಹಲಿ (ಪಿಟಿಐ): ಬಿಹಾರ ವಿಧಾನಸಭೆ ಚುನಾವಣೆಯಲ್ಲಿನ ಬಿಜೆಪಿ ಸೋಲಿಗೆ ನರೇಂದ್ರ ಮೋದಿ, ಅಮಿತ್ ಷಾ ಹಾಗೂ ಅರುಣ್ ಜೇಟ್ಲಿ ಅವರನ್ನು ಹೊಣೆಯಾಗಿಸಬೇಕು ಎಂದಿರುವ ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಹೇಳಿದ್ದಾರೆ.
ಹಿಂದಿನ ಭರವಸೆಗಳನ್ನು ಈಡೇರಿಸದ ಕಾರಣ ‘ಮೋದಿ ಕೇಂದ್ರಿತ’ ಪ್ರಚಾರ ‘ವಿಶ್ವಾಸ ಕಳೆದುಕೊಂಡಿತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸೋಲಿಗೆ ಯಾರನ್ನು ಹೊಣೆಯಾಗಿಸಬೇಕು ಎಂಬ ಪ್ರಶ್ನೆಗೆ ಶೌರಿ ಅವರು, ‘ಅದು ಮೋದಿ, ಷಾ ಹಾಗೂ ಜೇಟ್ಲಿ’ ಎಂದು ಉತ್ತರಿಸಿದ್ದಾರೆ. ಅಲ್ಲದೇ, ‘ಪಕ್ಷ ಅಥವಾ ಸರ್ಕಾರದಲ್ಲಿ ನಾಲ್ಕನೇ ವ್ಯಕ್ತಿಯೇ ಇಲ್ಲ’ ಎಂದಿದ್ದಾರೆ.
ಅಲ್ಲದೇ, ಇನ್ನುಂದೆ ಪಕ್ಷದಲ್ಲಿ ನಾಯಕತ್ವದ ವಿರುದ್ಧ ‘ಮೌನ ಅಸಹಕಾರ ಚಳವಳಿ’ ಹೆಚ್ಚಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಭಾನುವಾರ ಪ್ರಕಟಗೊಂಡ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೇವಲ 58 ಕ್ಷೇತ್ರಗಳಲ್ಲಿ ಮಾತ್ರವೇ ಗೆಲುವು ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.