ADVERTISEMENT

ಬೋಧಗಯಾದಲ್ಲಿ ಸಿರಿಸೇನ ದಂಪತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2015, 8:33 IST
Last Updated 18 ಫೆಬ್ರುವರಿ 2015, 8:33 IST

ಗಯಾ (ಪಿಟಿಐ):  ಭಾರತ ಭೇಟಿಯಲ್ಲಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು  ಮಂಗಳವಾರ ಬೋಧಗಯಾಕ್ಕೆ ಭೇಟಿ ನೀಡಿ ಭಗವಾನ್‌ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷದ ಕೆಳಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಿಹಾರದ ರಾಜಧಾನಿ ಪಟ್ನಾ­ದಿಂದ ಸುಮಾರು 95 ಕಿಲೋ­ಮೀಟರ್ ದೂರದಲ್ಲಿರುವ, ಯುನೆಸ್ಕೊ ವಿಶ್ವ ಪಾರಂಪರಿಕ ತಾಣ­ವಾದ ಬೋಧಗಯಾ ದೇವಸ್ಥಾನ­ದಲ್ಲಿ ಸಿರಿಸೇನ ಅವರು ಸುಮಾರು ಒಂದು ಗಂಟೆ ಕಾಲ ಕಳೆದರು.

ಸಿರಿಸೇನ ಅವರು ತಮ್ಮ ಪತ್ನಿ ಜಯಂತಿ ಸಿರಿಸೇನ ಹಾಗೂ ಇತರ 24 ಮಂದಿಯೊಂದಿಗೆ ಮಹಾ­ಬೋಧಿ ವೃಕ್ಷದ ಕೆಳಗೆ ಹದಿನೈದು ನಿಮಿಷ ಧ್ಯಾನ ಮಾಡಿದರು ಎಂದು ದೇವಸ್ಥಾನ ಸಮಿತಿಯ ಸದಸ್ಯ ಅರವಿಂದ್‌  ಕುಮಾರ್‌ ಸಿಂಗ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.