ADVERTISEMENT

ಭಾರತದಲ್ಲಿ ಇ–ಸಿಗರೇಟ್‌ನ 36 ಬ್ರ್ಯಾಂಡ್ ಅಕ್ರಮ ಮಾರಾಟ

ಪಿಟಿಐ
Published 30 ಮೇ 2019, 19:45 IST
Last Updated 30 ಮೇ 2019, 19:45 IST
   

ನವದೆಹಲಿ: ದೇಶದಲ್ಲಿ ಕಳೆದ ಮೂರು ವರ್ಷಗಳಿಂದ 36 ಕಂಪನಿಗಳು ಇ–ಸಿಗರೇಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿವೆ ಎಂದು ನವದೆಹಲಿಯ ’ಕನ್ಸೂಮರ್‌ ವಾಯ್ಸ್‌‘ ಎಂಬ ಎನ್‌ಜಿಒ ನಡೆಸಿರುವ ಸಮೀಕ್ಷೆ ಹೇಳಿದೆ.

ದೇಶದಲ್ಲಿ ಇ–ಸಿಗರೇಟ್‌ ಮಾರಾಟವನ್ನು ತಡೆಗಟ್ಟಬೇಕು ಎಂದು ಕೇಂದ್ರದ ಆರೋಗ್ಯ ಇಲಾಖೆ ಹಲವಾರು ಪ್ರಯತ್ನಗಳ ಹೊರತಾಗಿಯೂ ಈ ಸಾಧನಗಳ ಅಕ್ರಮ ಮಾರಾಟ ನಿರಂತರವಾಗಿ ನಡೆಯುತ್ತಿದೆ ಎಂದು ’ಕನ್ಸೂಮರ್‌ ವಾಯ್ಸ್‌‘ ಹೇಳಿದೆ. ಮೇ 31ರಂದು ವಿಶ್ವ ತಂಬಾಕು ದಿನ. ಈ ಅಂಗವಾಗಿ ಸಂಸ್ಥೆಯು ತಾನು ಕೈಗೊಂಡ ಸಮೀಕ್ಷೆಯ ವಿವರಗಳನ್ನು ಬಿಡುಗಡೆ ಮಾಡಿದೆ.

ಇ–ಸಿಗರೇಟ್‌ ಸಾಧನಗಳ ಮಾರಾಟ ಪ್ರಸ್ತುತ ಜಾರಿಯಲ್ಲಿರುವ ತಂಬಾಕು ಉತ್ಪಾದನೆ, ವಿತರಣೆ ಹಾಗೂ ಉಪಯೋಗ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ಈ ಸಾಧನಗಳು ನಿಕೋಟಿನ್‌ ಬಿಡುಗಡೆ ಮಾಡುವ ಪ್ರಕ್ರಿಯೆ ಜನರನ್ನು ಆಕರ್ಷಿಸುತ್ತದೆ. ಕಡಿಮೆ ಅಪಾಯಕಾರಿ ಎಂಬ ಪ್ರಚಾರದೊಂದಿಗೆ ಈ ಸಾಧನಗಳ ಅಕ್ರಮ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ ಎಂದೂ ಸಮೀಕ್ಷೆ ಹೇಳಿದೆ.

ADVERTISEMENT

’ದೆಹಲಿಯಲ್ಲಿ 8 ಬ್ರ್ಯಾಂಡ್‌ನ ಇ–ಸಿಗರೇಟ್‌ಗಳನ್ನು ಅಂಗಡಿಗಳಲ್ಲಿ ಹಾಗೂ ಆನ್‌ಲೈನ್‌ ಮೂಲಕ ಮಾರಾಟ ಮಾಡಲಾಗುತ್ತಿದೆ. ಬ್ರ್ಯಾಂಡ್‌, ಸಾಮರ್ಥ್ಯ, ಫ್ಲೇವರ್‌ ಹಾಗೂ ವೈವಿಧ್ಯದ ಆಧಾರದ ಮೇಲೆ ಇವುಗಳ ಬೆಲೆ ₹ 200ರಿಂದ ₹ 6,800 ವರೆಗೆ ಇದೆ‘ ಎಂದು ಸಂಸ್ಥೆಯ ಸಿಒಒ ಅಸೀಮ್‌ ಸನ್ಯಾಲ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.