ನವದೆಹಲಿ: ಮರಣದಂಡನೆ ವಿಧಿಸಲು ಹಲವು ವಿಧಾನಗಳಿದ್ದರೂ ನೇಣಿಗೆ ಏರಿಸುವುದು ಅತ್ಯಂತ ತ್ವರಿತವಾಗಿ ಜೀವ ತೆಗೆಯುವ ವಿಧಾನ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.
‘ಅಪರಾಧ ಪ್ರಕ್ರಿಯಾ ಸಂಹಿತೆಯ 354(5)ನೇ ಸೆಕ್ಷನ್ ಅಡಿಯಲ್ಲಿನ ಈ ಶಿಕ್ಷೆ ಕ್ರೂರ, ಅಮಾನವೀಯ ಅಲ್ಲ’ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ಮರಣದಂಡನೆ ವಿಧಿಸಲು ಕಡಿಮೆ ನೋವುಳ್ಳ ಬೇರೆ ವಿಧಾನ ಅಳವಡಿಸಿಕೊಳ್ಳಬೇಕು ಎಂದು ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯಿಸಿ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರ ಈ ವಿಷಯ ಉಲ್ಲೇಖಿಸಿದೆ.
ಈ ವಿಧಾನದ ಶಿಕ್ಷೆ ಸಂವಿಧಾನದ 21ನೇ ಕಲಂ ಅನ್ನು (ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸುವುದಿಲ್ಲ ಎಂದು ದೀನಾ ಪ್ರಕರಣದಲ್ಲಿ (1983) ಸುಪ್ರೀಂ ಕೋರ್ಟ್ ಹೇಳಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಿಶ್ವದ ವಿವಿಧೆಡೆ ಇರುವ ಮರಣ ದಂಡನೆಯ ಪದ್ಧತಿಯನ್ನು ಪರಿಗಣಿಸಿದರೆ ನೇಣು ಹಾಕುವುದೇ ಅತ್ಯಂತ ಸೂಕ್ತ ವಿಧಾನ ಎನ್ನುವ ನಿರ್ಣಯಕ್ಕೆ ಬರಲಾಗಿದೆ.
ಎದೆಗೆ ಗುಂಡು ಹೊಡೆದು ಶಿಕ್ಷೆ ಜಾರಿಗೊಳಿಸುವುದು ಸುರಕ್ಷಿತವಲ್ಲ. ಗುಂಡು ಹೊಡೆಯುವವರು ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಗುರಿ ತಪ್ಪಿದರೆ ರಕ್ತ ಸೋರಿ ಅಪರಾಧಿಯ ಸಾವು ನಿಧಾನವಾಗುತ್ತದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.