ADVERTISEMENT

ಮಹಾಮಳೆಗೆ ಮುಂಬೈ ತತ್ತರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2015, 10:24 IST
Last Updated 19 ಜೂನ್ 2015, 10:24 IST

ಮುಂಬೈ (ಪಿಟಿಐ): ಮುಂಬೈನಲ್ಲಿ ಗುರುವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು ಮಹಾ ಮಳೆಗೆ ವಾಣಿಜ್ಯ ನಗರಿ ತತ್ತರಿಸಿದೆ.

ಪಶ್ಚಿಮ, ಕೇಂದ್ರ, ಹಾರ್ಬರ್‌ ಪ್ರದೇಶಗಳ ರೈಲ್ವೆ ಮಾರ್ಗಗಳು ಜಲಾವೃತಗೊಂಡಿವೆ. ಇದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಕಚೇರಿಗಳಿಗೆ ತೆರಳಲು ಲೋಕಲ್‌ ರೈಲುಗಳನ್ನೇ ಅವಲಂಬಿಸಿರುವ ಸಾವಿರಾರು ಜನರಿಗೆ ರೈಲು ಸಂಚಾರ ಸ್ಥಗಿತದ ಬಿಸಿ ತಟ್ಟಿದೆ. ಮುಂಬೈನಲ್ಲಿ ಸುಮಾರು 80 ಲಕ್ಷ ಮಂದಿ ನಿತ್ಯ ಸಂಚಾರಕ್ಕೆ ಲೋಕಲ್‌ ರೈಲುಗಳನ್ನೇ ಅವಲಂಬಿಸಿದ್ದಾರೆ.

ADVERTISEMENT

ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮಹಾ ಮಳೆಯಿಂದ ವಿಮಾನಗಳ ಸಂಚಾರದಲ್ಲೂ ವ್ಯತ್ಯಯವಾಗಿದ್ದು, ಮುಂಬೈಗೆ ಬರಬೇಕಿದ್ದ 8 ವಿಮಾನಗಳ ಮಾರ್ಗ ಬದಲಿಸಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.