ADVERTISEMENT

ಮಹಾರಾಷ್ಟ್ರ ವಿಧಾನ ಪರಿಷತ್ ಫಲಿತಾಂಶ: ಯಥಾ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2015, 19:30 IST
Last Updated 30 ಡಿಸೆಂಬರ್ 2015, 19:30 IST

ಮುಂಬೈ(ಪಿಟಿಐ): ಸ್ಥಳೀಯ ಸಂಸ್ಥೆ ಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮೂರು ಸ್ಥಾನಗಳನ್ನು ಗಳಿಸಿದೆ. ಭಾನುವಾರ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಶಿವಸೇನೆ ಎರಡು, ಬಿಜೆಪಿ, ಎನ್‌ಸಿಪಿ ಮತ್ತು ಪಕ್ಷೇತರರು ತಲಾ ಒಂದು ಸ್ಥಾನ ಗಳಿಸಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳು ಹಿಂದೆ ಹೊಂದಿದ್ದ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿವೆ.

ಕಾಂಗ್ರೆಸ್ ಪಕ್ಷ ಮುಂಬೈ, ಧುಳೆ –ನಂದುರ್‌ಬಾರ್ ಹಾಗೂ ಕೊಲ್ಲಾ ಪುರದಲ್ಲಿ ಜಯ ಗಳಿಸಿದೆ. ಶಿವ ಸೇನೆಯು ಮುಂಬೈ ಹಾಗೂ ಅಕೋಲ ವಾಸಿಮ್‌ ನಲ್ಲಿ ಗೆದ್ದಿದ್ದರೆ, ಬಿಜೆಪಿಯು ನಾಗ್ಪುರದಲ್ಲಿ ಜಯ ಸಾಧಿಸಿದೆ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪ್ರಶಾಂತ್ ಪರಿ ಚಾರಕ್ ಅವರು ಸೊಲ್ಲಾಪುರದಲ್ಲಿ ಗೆದ್ದಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಪಣ ಡವೀಸ್ ಅವರ ತವರು ಕ್ಷೇತ್ರ ನಾಗ್ಪುರ ಬಿಜೆಪಿಯ ಭದ್ರಕೋಟೆಯಾಗಿದ್ದು, ಗಿರೀಶ್ ವ್ಯಾಸ್ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.