ಮುಂಬೈ (ಪಿಟಿಐ): ಬಿಜೆಪಿಯಲ್ಲಿ ಕೇವಲ ಇಬ್ಬರು ಮಾತ್ರ (ನರೇಂದ್ರ ಮೋದಿ ಮತ್ತು ಅಮಿತ್ ಷಾ) ಎಲ್ಲ ನಿರ್ಧಾರ ತೆಗೆದುಕೊಳ್ಳುತ್ತಾರೆ. ಉಳಿದವರು ಅದನ್ನು ಅನುಷ್ಠಾನಗೊಳಿಸುತ್ತಾರೆ. ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಸತ್ತು ಹೋಗಿದೆ...
ಮುಂಬೈ ಬಿಜೆಪಿ ಶಾಸಕ ರಾಜ್ ಪುರೋಹಿತ್ ಹೇಳಿರುವ ದೃಶ್ಯವನ್ನು ಮಾರುವೇಷದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದೆ.
ಸಚಿವರಾದ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ ಹಾಗೂ ಪಂಕಜಾ ಮುಂಡೆ ಪ್ರಕರಣಗಳಿಂದ ಸಾಕಷ್ಟು ಮುಜುಗರಕ್ಕೆ ಒಳಗಾಗಿರುವ ಬಿಜೆಪಿಗೆ ಈ ಮಾರುವೇಷದ ಕಾರ್ಯಾಚರಣೆ ಮತ್ತಷ್ಟು ಮುಜುಗರ ತಂದಿಟ್ಟಿದೆ.
‘ರಾಜ್ ಠಾಕ್ರೆ ಒಬ್ಬ ಬೋಗಸ್ ನಾಯಕ. ಆತ ನಾಯಕನೇ ಅಲ್ಲ. ಆತ ಕೇವಲ ಒಂದು ಜಾತಿಯ ನಾಯಕ’ ಎಂದು ರಾಜ್ ಪುರೋಹಿತ್ ವೀಡಿಯೊದಲ್ಲಿ ಹೇಳಿದ್ದಾರೆ. ಇದರಿಂದ ಕೆರಳಿದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಕಾರ್ಯಕರ್ತರು ದಕ್ಷಿಣ ಮುಂಬೈನ ಕಲ್ಬಾದೇವಿ ಪ್ರದೇಶದಲ್ಲಿರುವ ಶಾಸಕನ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಆರ್ಎಸ್‌ಎಸ್, ಪ್ರಮೋದ್ ಮಹಾಜನ್ ಅಪಾರ ಹಣ, ಎನ್‌ಡಿಎ ಸರ್ಕಾರದ ನಿರ್ಧಾರಗಳ ಕುರಿತು ಅವರು ಅಸಮಾಧಾನ ಹೊರ ಹಾಕಿದ್ದಾರೆ.
‘ವಿಡಿಯೊದಲ್ಲಿರುವ ಧ್ವನಿ ನನ್ನದಲ್ಲ. ಇದನ್ನು ತಿರುಚಲಾಗಿದೆ’ ಎಂದು ಶಾಸಕ ರಾಜ್ ಪುರೋಹಿತ್ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಸತ್ಯಾಂಶ ಕಂಡು ಬಂದರೆ ಶಾಸಕ ರಾಜ್ ಪುರೋಹಿತ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕ ಹೇಳಿದೆ
</p></p>
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.