ನವದೆಹಲಿ (ಪಿಟಿಐ): ಸಮಾಜದಲ್ಲಿ ಅಸಮಾನತೆ ಇನ್ನೂ ದೂರವಾಗಿಲ್ಲ ಎಂದು ಹಲುಬಿರುವ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮಾನತೆ ಬರುವವರೆಗೂ ಶೋಷಿತ ವರ್ಗಗಳಿಗೆ ಮೀಸಲಾತಿ ಮುಂದುವರಿಸಬೇಕು ಎಂದಿದೆ. ಆದರೆ, ಮೀಸಲಾತಿ ವಿಷಯದಲ್ಲಿ ರಾಜಕೀಯ ಸಲ್ಲ ಎಂದೂ ಎಚ್ಚರಿಕೆ ನೀಡಿದೆ.
‘ಮೀಸಲಾತಿಗೆ ನಮ್ಮ ಬೆಂಬಲ ಇದೆ. ಸಾಮಾಜಿಕವಾಗಿ ಸಮಾನತೆ ಸಾಧಿಸುವವರೆಗೂ ಮೀಸಲಾತಿ ಮುಂದುವರಿಸುವ ಅಗತ್ಯ ಇದೆ. ಆದರೆ, ಇದು ರಾಜಕೀಯದ ವಿಷಯ ಆಗಬಾರದಷ್ಟೆ’ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ (ಮುಖ್ಯಸ್ಥ) ಮೋಹನ್ ಭಾಗವತ್ ಅವರು ಭಾನುವಾರ ಪುಸ್ತಕವೊಂದರ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.
‘ಶೋಷಿತ ವರ್ಗಗಳು ದೇಶದ ಒಳಿತಿಗಾಗಿ ಅನ್ಯಾಯವನ್ನು ಶತಮಾನಗಳಿಂದ ಸಹಿಸಿಕೊಂಡಿವೆ. ಇಂತಹ ಸಮುದಾಯಗಳಿಗೆ ಸಾಮಾಜಿಕ ಸಮಾನತೆ ದೊರಕಬೇಕು. ಸಮಾನತೆ ಸಾಧಿಸಲು ಇನ್ನೂ 100 ವರ್ಷಗಳಾದರೂ ಸರಿಯೇ ಮೀಸಲಾತಿ ಮುಂದುವರಿಸಬೇಕು. ಇದರಿಂದ ಕೆಲವು ಸಮುದಾಯಗಳಿಗೆ ಅನ್ಯಾಯವಾಗಬಹುದು ಆದರೂ ಚಿಂತಿಯಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.