ಪಟ್ನಾ (ಪಿಟಿಐ): ಬಿಹಾರ ವಿಧಾನಸಭೆಗೆ ಮೊದಲ ಹಂತದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಶೇಕಡ 57ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
10 ಜಿಲ್ಲೆಗಳಲ್ಲಿ ವ್ಯಾಪಿಸಿರುವ 49 ವಿಧಾನಸಭೆ ಕ್ಷೇತ್ರಗಳಲ್ಲಿ ಕೆಲ ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಇನ್ನುಳಿದಂತೆ ಮತದಾನ ಶಾಂತವಾಗಿತ್ತು.
ನಕ್ಸಲ್ ಉಪಟಳದ ಕ್ಷೇತ್ರಗಳಾದ ತಾರಾಪುರ,ಜಮಾಲಪುರ, ಸೂರ್ಯಗ್ರಹ, ರಜೌಲಿ (ಎಸ್‌ಸಿ), ಗೋವಿಂದಪುರ, ಸಿಕಂದರ್ (ಎಸ್.ಸಿ), ಜಮುಯಿ, ಝಾಝಾ ಹಾಗೂ ಚಕೈಗಳಲ್ಲಿ ಮಧ್ಯಾಹ್ನ 3ಗಂಟೆಗೆ ಮತದಾನ ಅಂತ್ಯಗೊಂಡಿತು.
ಇನ್ನು, ನಿಗದಿಯಂತೆ ಅಲೌಲಿ (ಎಸ್.ಸಿ), ಬೆಲ್ದೌರ್, ಕಟೋರಿಯಾ (ಎಸ್.ಟಿ), ಬೆಲ್ಹಾರ್ ಕ್ಷೇತ್ರಗಳಲ್ಲಿ ಸಂಜೆ 4 ಗಂಟೆಗೆ ಮತದಾನ ಮುಕ್ತಾಯಗೊಂಡಿತು. ಇನ್ನುಳಿದ 36 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಗೆ ಮತದಾನ ಅಂತ್ಯ ಕಂಡಿದೆ.
ಮೊದಲ ಹಂತದ ಚುನಾವಣೆಯಲ್ಲಿ 54 ಮಹಿಳೆಯರು ಸೇರಿದಂತೆ 583 ಅಭ್ಯರ್ಥಿಗಳು ಕಣದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.