ADVERTISEMENT

ಮೋದಿ ವಿರುದ್ಧ ಟೀಕೆ: ವಿದ್ಯಾರ್ಥಿ ಸಂಘಟನೆ ಮೇಲೆ ನಿಷೇಧ

​ಪ್ರಜಾವಾಣಿ ವಾರ್ತೆ
Published 29 ಮೇ 2015, 6:57 IST
Last Updated 29 ಮೇ 2015, 6:57 IST

ನವದೆಹಲಿ (ಪಿಟಿಐ):  ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅಪಪ್ರಚಾರ ಅಥವಾ ದ್ವೇಷ ಬಿತ್ತಲಾಗುತ್ತಿದೆ ಎಂದು ಆರೋಪಿಸಿ ಮದ್ರಾಸ್‌ ಐಐಟಿಯು ವಿದ್ಯಾರ್ಥಿಗಳ ಆನ್‌ಲೈನ್‌ ಚರ್ಚಾ ವೇದಿಕೆಯ ಮೇಲೆ ನಿಷೇಧ ಹೇರಿದೆ.

ಇಲ್ಲಿನ ಐಐಟಿ ವಿದ್ಯಾರ್ಥಿಗಳು ಅಂಬೇಡ್ಕರ್‌–ಪೆರಿಯಾರ್‌ ಅಧ್ಯಯನ ಕೇಂದ್ರ(ಎಪಿಎಸ್‌ಸಿ)ವನ್ನು ತೆರೆದಿದ್ದು ಆನ್‌ಲೈನ್‌ನಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಪ್ರಗತಿಪರ ಚರ್ಚೆಗಳನ್ನು ನಡೆಸಲಾಗುತ್ತದೆ. ಈ ಎಪಿಎಸ್‌ಸಿಯಲ್ಲಿ ಮೋದಿ ಸರ್ಕಾರದ ವಿರುದ್ಧ ದ್ವೇಷ ಬಿತ್ತಲಾಗುತ್ತಿದೆ ಎಂದು ಆರೋಪಿಸಿ ಆ ಚರ್ಚಾ ವೇದಿಕೆಯನ್ನು ಮದ್ರಾಸ್‌ ಐಐಟಿ ನಿಷೇಧಿಸಿದೆ.

ಐಐಟಿಯ ಡೀನ್‌ ಶಿವಕುಮಾರ್‌ ಎಂ ಶ್ರೀನಿವಾಸನ್‌ ಅವರು ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘದ ನಿಯಮಗಳಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸದ್ದಾರೆ. ಮೋದಿ ಸರ್ಕಾರವನ್ನು ಟೀಕಿಸಿರುವ ಬಗ್ಗೆ ನೂರಾರು ವಿದ್ಯಾರ್ಥಿಗಳು ಪತ್ರ ಬರೆದಿರುವುದರಿಂದ ಎಪಿಎಸಿಯನ್ನು ನಿಷೇಧಿಸಲಾಗಿದೆ ಎಂದು ಐಐಟಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಪಿಎಸ್‌ಸಿಯ ಸದಸ್ಯರೊಬ್ಬರು ನಾವು ಸಂವಿಧಾನದ ಚೌಕಟ್ಟಿನ ಅಡಿಯಲ್ಲೇ ಚರ್ಚೆ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT