ನವದೆಹಲಿ (ಪಿಟಿಐ/ಐಎಎನ್‌ಎಸ್): ದೇಶದ ಮಾಹಿತಿ ರಕ್ಷಣೆ ಮತ್ತು ಸೈಬರ್ ದಾಳಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ `ರಾಷ್ಟ್ರೀಯ ಸೈಬರ್ ಭದ್ರತಾ ನೀತಿ'(2013)ಯನ್ನು ಮಂಗಳವಾರ ಬಿಡುಗಡೆ ಮಾಡಿತು.
ಐಟಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಇಂದು ಅಧಿಕೃತವಾಗಿ ನೀತಿಯನ್ನು ಬಿಡುಗಡೆ ಮಾಡಿದರು. ದೇಶದ ಅರ್ಥಿಕ ಸ್ಥಿರತೆ, ಇಂಧನ ಕ್ಷಮತೆ, ಮೂಲಸೌಕರ್ಯ, ರಕ್ಷಣಾ ಮಾಹಿತಿ, ತಂತ್ರಜ್ಞಾನ, ಪರಮಾಣು ಸ್ಥಾವರಗಳು, ದೂರಸಂಪರ್ಕ ವ್ಯವಸ್ಥೆ ಸೇರಿದಂತೆ ಮತ್ತಿತರ ವಲಯಗಳ ಮಾಹಿತಿ ಸೋರಿಕೆಯಾಗುವುದನ್ನು ಮತ್ತು ಸೈಬರ್‌ಗೆ ಕನ್ನ ಹಾಕುವುದನ್ನು ಈ ನೀತಿ ಮುಖಾಂತರ ತಡೆಯಬಹುದಾಗಿದೆ ಎಂದು ಅವರು ವಿವರಿಸಿದರು.
ಈ ಕಾಯ್ದೆಯಲ್ಲಿ ವಿದೇಶಗಳಲ್ಲಿರುವ ಸೈಬರ್ ಕಳ್ಳರನ್ನು ಸ್ವದೇಶಕ್ಕೆ ಕರೆ ತಂದು ವಿಚಾರಣೆ ನಡೆಸುವ ಮತ್ತು ಅವರಿಗೆ ಶಿಕ್ಷೆ ವಿಧಿಸುವ ಅವಕಾಶಗಳಿವೆ ಎಂದು ಕಪಿಲ್ ಸಿಬಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.