ನವದೆಹಲಿ (ಪಿಟಿಐ): ತಾನು ಬ್ರಿಟಿಷ್ ಪ್ರಜೆ ಎಂದು ಬ್ರಿಟನ್ ಅಧಿಕಾರಗಳ ಎದುರು ಹೇಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತದ ಪೌರತ್ವ ಮತ್ತು ಲೋಕಸಭೆ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ.
ಬ್ರಿಟನ್ ಕಂಪನಿ ಕಾಯ್ದೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ರಾಹುಲ್ ಸಲ್ಲಿಸಿದ್ದ ದಾಖಲೆಗಳಲ್ಲಿ ತಾನುಬ್ರಿಟನ್ ಪ್ರಜೆ ಎಂದು ಹೇಳಿದ್ದಾರೆ ಎಂದು ಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ದಾಖಲೆಗ ಳನ್ನು ಬಹಿರಂಗಪಡಿಸಿದರು.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸ್ವಾಮಿ ಅವರು, ಸಂವಿಧಾನವನ್ನು ಉಲ್ಲಂಘಿಸಿರು ವುದರಿಂದ ರಾಹುಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿ ಸಿದ್ದಾರೆ.
ಸ್ವಾಮಿ ಅವರ ಈ ಆರೋಪವನ್ನು ಅಲ್ಲಗಳೆದಿರುವ ಕಾಂಗ್ರೆಸ್, ‘ಸದಾ ಸುದ್ದಿಯಲ್ಲಿರಬೇಕೆಂದು ಸ್ವಾಮಿ ಬಯಸುತ್ತಾರೆ, ಅದು ಅವರ ಚಟ’ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಅಜಯ್ ಮಾಕನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.