ADVERTISEMENT

ರೈಲಿಗೆ ಸಿಲುಕಿ 46 ಆನೆಗಳ ಸಾವು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2012, 19:30 IST
Last Updated 30 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): ರೈಲಿಗೆ ಸಿಲುಕಿ ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಒಟ್ಟು 46 ಆನೆಗಳು ಸತ್ತಿವೆ ಎಂದು ಕೇಂದ್ರ ಸರ್ಕಾರವು ಗುರುವಾರ ಮಾಹಿತಿ ನೀಡಿದೆ.

ಈಶಾನ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಆನೆಗಳು ಸತ್ತಿದ್ದು, ಈ ವಲಯದಲ್ಲಿ 2012ರ ಆಗಸ್ಟ್ 15ರವರೆಗೆ ಒಟ್ಟು 36 ಆನೆಗಳು ರೈಲು ಅಪಘಾತಕ್ಕೆ ತುತ್ತಾಗಿವೆ ಎಂದು ಕೇಂದ್ರ ರೈಲ್ವೆ ಸಚಿವ ಮುಕುಲ್ ರಾಯ್ ಲೋಕಸಭೆಗೆ ತಿಳಿಸಿದ್ದಾರೆ.

2009ರಲ್ಲಿ 9, 2010ರಲ್ಲಿ 20, 2011ರಲ್ಲಿ 9 ಮತ್ತು 2012ರ ಆಗಸ್ಟ್ ವರೆಗೆ 8 ಆನೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ರೈಲ್ವೆ ವಲಯಗಳಲ್ಲಿ ಸಂಭವಿಸುವ ಈ ಆನೆ ಸಾವುಗಳನ್ನು ತಡೆಗಟ್ಟಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದು, ಅರಣ್ಯ ಸಚಿವರೊಂದಿಗೆ ಸತತ ಸಭೆಯನ್ನು ನಡೆಸಲಾಗುತ್ತಿದೆ ಎಂದು ರಾಯ್ ತಿಳಿಸಿದ್ದಾರೆ.

ADVERTISEMENT

ಆನೆ ಸಂಚರಿಸುವ ವಲಯವನ್ನು ಗುರುತಿಸುವ ಜವಾಬ್ದಾರಿ ಅರಣ್ಯ ಇಲಾಖೆಯದ್ದು. ಅಲ್ಲದೆ ಈ ವಲಯದಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸುವ ಮೂಲಕ ರೈಲು ಚಾಲಕರಿಗೆ ಎಚ್ಚರಿಕೆ ನೀಡಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.