ನವದೆಹಲಿ (ಪಿಟಿಐ): ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಮಂಗಳವಾರ ಸಂಸತ್ತಿನಲ್ಲಿ ಕ್ಷಮೆಯಾಚಿಸಿದರು.
ದೆಹಲಿಯಲ್ಲಿ ನಡೆದ ಚುನಾವಣೆ ಸಮಾರಂಭವೊಂದರಲ್ಲಿ ’ದೆಹಲಿ ಮತದಾರರು ರಾಮನ ಮಕ್ಕಳು ಮತ್ತು ಜಾರಜರ(ಹಾದರ)ಮಕ್ಕಳು ಯಾರು ಎಂಬುದನ್ನು ಗುರುತಿಸಿ ಮತ ನೀಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಜ್ಯೋತಿ ಅವರ ಹೇಳಿಕೆಯನ್ನು ಖಂಡಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಇಂದು ಸಂಸತ್‌ನ ಉಭಯ ಸದನಗಳಲ್ಲೂ ಸಚಿವೆ ಜ್ಯೋತಿ ಹೇಳಿಕೆಯನ್ನು ಖಂಡಿಸಿ ವಿಪಕ್ಷಗಳು ಗದ್ದಲ ಉಂಟು ಮಾಡಿದವು. ಇದರಿಂದ ಉಭಯ ಸದನವನ್ನು ಎರಡು ಗಂಟೆಗಳ ಕಾಲ ಮುಂದೂಡಬೇಕಾಯಿತು.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪಟ್ಟು ಹಿಡಿದವು. ಈ ಸಂದರ್ಭದಲ್ಲಿ ‘ನಾನು ಯಾರನ್ನು ನೋಯಿಸುವ ಉದ್ದೇಶದಿಂದ ಆ ಹೇಳಿಕೆ ನೀಡಿಲ್ಲ’ ಎಂದು ಜ್ಯೋತಿ ಬೇಷರತ್ ಕ್ಷಮೆ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.