ನವದೆಹಲಿ: ವಾಯುವ್ಯ ದೆಹಲಿಯ ಕಾಂಗ್ರೆಸ್ ಸಂಸದ ಡಾ. ಉದಿತ್ ರಾಜ್ ಅವರು ಮತಯಂತ್ರ ಅಕ್ರಮದ ಕುರಿತ ವಿಚಾರ ಪ್ರಸ್ತಾಪಿಸುವ ವೇಳೆ, ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ.
ಎಲ್ಲ ವಿವಿಪ್ಯಾಟ್ ಮತ ಪತ್ರಗಳ ತಾಳೆ ಪ್ರಸ್ತಾವವನ್ನು ತಿರಸ್ಕರಿಸಿರುವ ಕೋರ್ಟ್ ನಿರ್ಧಾರದ ಕುರಿತು ಬುಧವಾರ ಟ್ವೀಟ್ ಮಾಡಿರುವ ಅವರು, ‘ ವಿವಿಪ್ಯಾಟ್‌ಗಳ ಮತಪತ್ರಗಳ ಎಣಿಕೆಗೆ ಸುಪ್ರೀಂ ಕೋರ್ಟ್ ಯಾಕೆ ಅನುಮತಿ ನೀಡುತ್ತಿಲ್ಲ. ಕೋರ್ಟ್ ಏನಾದರೂ ಚುನಾವಣಾ ಆಕ್ರಮದಲ್ಲಿ ತೊಡಗಿದೆಯೇ? ಎಲ್ಲ ವಿವಿಪ್ಯಾಟ್‌ಗಳ ಎಣಿಕೆಗೆ ದೇಶದ 22 ಪ್ರಮುಖ ಪಕ್ಷಗಳು ಒತ್ತಾಯ ಮಾಡುತ್ತಿದ್ದರೂ, ವಿಳಂಬ ಫಲಿತಾಂಶದ ಕಾರಣ ನೀಡಿ ಸುಪ್ರೀಂ ಕೋರ್ಟ್ ಆ ಮನವಿಯನ್ನು ತಳ್ಳಿಹಾಕುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ‘ ಮೂರು ತಿಂಗಳ ಕಾಲ ನಡೆದ ಚುನಾವಣೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವಾಗ, ಫಲಿತಾಂಶ ಒಂದೆರಡು ದಿನ ವಿಳಂಬವಾಗುವುದು ಹೆಚ್ಚೇ? ನಾನು ಸುಪ್ರೀಂ ಕೋರ್ಟ್ ವಿರುದ್ಧ ಆರೋಪ ಮಾಡುತ್ತಿಲ್ಲ. ನಾನು ನನ್ನ ಕಾಳಜಿಯನ್ನಷ್ಟೇ ವ್ಯಕ್ತಪಡಿಸಿದ್ದೇನೆ,’ ಎಂದು ಹೇಳಿದ್ದಾರೆ.
ಈ ಮೊದಲು ಬಿಜೆಪಿಯಲ್ಲಿದ್ದ ಉದಿತ್ ರಾಜ್ ಅವರು ಕಳೆದ ತಿಂಗಳ 24ರಂದು ಕಾಂಗ್ರೆಸ್ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.