ನವದೆಹಲಿ (ಪಿಟಿಐ): ಆರು ದಿನಗಳ ಕಾಲ ಸಿಯಾಚಿನ್ ನೀರ್ಗಲ್ಲು ಪ್ರದೇಶದ ಹಿಮರಾಶಿಯಲ್ಲಿ ಹೂತು ಹೋಗಿ ಬದುಕಿ ಬಂದಿದ್ದ ಯೋಧ ಹನುಮಂತಪ್ಪ ಕೊಪ್ಪದ ಗುರುವಾರ ನಿಧನರಾಗಿದ್ದಾರೆ.
ಇಂದು ಬೆಳಗ್ಗೆ 11 .45ಕ್ಕೆ ನಿಧನರಾದರು ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ. ‘ಅವರಿಗೆ ಅತ್ಯುತ್ತಮ ಚಿಕಿತ್ಸೆ ಮತ್ತು ಆರೈಕೆ ಒದಗಿಸಿ, ಜೀವರಕ್ಷಕ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಹಾಗಿದ್ದರೂ ಅವರ ದೇಹಸ್ಥಿತಿ ಕ್ಷಿಣಿಸಿದ್ದರಿಂದ ಬದುಕುಳಿಯಲಿಲ್ಲ’ ಎಂದು ಸೇನಾ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ದೇಹ ಉಷ್ಣತೆಗೆ ಮತ್ತೆ ಹೊಂದಿಕೊಳ್ಳುವ ಪ್ರಕ್ರಿಯೆಯಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾದ್ದರಿಂದ ಹನುಮಂತಪ್ಪ ಕೊನೆಯುಸಿರೆಳೆದರು ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.