ADVERTISEMENT

ಶಬರಿಮಲೆ ಯಾತ್ರೆ: ಹಾವು ಹಿಡಿಯಲು ತಂಡ ನೇಮಕ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST

ಶಬರಿಮಲೆ (ಪಿಟಿಐ): ಇಲ್ಲಿಗೆ ಬರುವ ಯಾತ್ರಾರ್ಥಿಗಳನ್ನು ಹಾವುಗಳ ಕಾಟದಿಂದ ರಕ್ಷಿಸಲು ಹಾವು ಹಿಡಿಯುವವರು ಮುಂದಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಪ್ರಸಿದ್ಧ ಯಾತ್ರಾಸ್ಥಳವಾದ ಶಬರಿಮಲೆಗೆ ದೇಶದ ಹಾಗೂ ಹೊರದೇಶಗಳ ಜನಸಾಗರವೇ ಹರಿದು ಬರುತ್ತಿದೆ.

ಆದರೆ ಪಶ್ಚಿಮ ಘಟ್ಟದ ದಟ್ಟ ಕಾಡಿನಿಂದ ಯಾತ್ರಾಸ್ಥಳ ಆವೃತವಾಗಿದ್ದು, ಕಾಡು ಹಾವು, ಚಿರತೆ, ಮುಳ್ಳು ಹಂದಿಗಳ ವಾಸಸ್ಥಾನವಾಗಿದೆ. ಯಾತ್ರಾರ್ಥಿಗಳು ಭೀತಿ ಪಡುತ್ತಿದ್ದಾರೆ.  ಈ ಭೀತಿಯನ್ನು ದೂರ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಹಾವು ಹಿಡಿಯುವವರ ಒಂದು ತಂಡವನ್ನು ರಚಿಸಿದೆ.

ಅಲ್ಲದೇ ಅವರ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಪೊಲೀಸರಿಗೆ ನೀಡಲಾಗಿದ್ದು, ಹಾವು ಕಂಡ ತಕ್ಷಣ ಪೊಲೀಸರು ಕೂಡಲೇ ಸಂಪರ್ಕಿಸಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.