ADVERTISEMENT

ಶಿವಕಾಶಿ: ಮತ್ತೊಂದು ಪಟಾಕಿ ಘಟಕದಲ್ಲಿ ದುರಂತ, ಮೂವರು ಭಸ್ಮ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2012, 8:50 IST
Last Updated 28 ಸೆಪ್ಟೆಂಬರ್ 2012, 8:50 IST

ಶಿವಕಾಶಿ (ಪಿಟಿಐ): ನಗರದ ಗುಡಿಸಲು ಒಂದರಲ್ಲಿ ಇದ್ದ ಅಕ್ರಮ ಪಟಾಕಿ ಘಟಕವೊಂದರಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಮೂವರು ಸುಟ್ಟು ಕರಕಲಾಗಿ. ಇತರ ಮೂವರು ತೀವ್ರವಾಗಿ ಸುಟ್ಟುಗಾಯಗಳಿಗೆ ಒಳಗಾಗಿದ್ದಾರೆ.

 ಶಿವಕಾಶಿ ಸಮೀಪದ ಮುಧಾಲಿಪಟ್ಟಿಯ ಪಟಾಕಿ ತಯಾರಿ ಘಟಕದಲ್ಲಿ 39 ಮಂದಿಯನ್ನು ಬಲಿ ತೆಗೆದುಕೊಂಡ ಪಟಾಕಿ ಘಟಕದ ಭಾರಿ ಅಗ್ನಿದುರಂತದ ನೆನಪು ಆರುವ ಮುನ್ನವೇ ನಗರದ ವಿಜಯಕರಿಸಾಲ್ಕುಲಂನಲ್ಲಿ ಈ ದುರಂತ ಸಂಭವಿಸಿದೆ.

ಗುಡಿಸಲು ಒಂದರಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಪಟಾಕಿ ತಯಾರಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 5ರ ಪಟಾಕಿ ದುರಂತದ ಬಳಿಕ ಅಧಿಕಾರಿಗಳು ಪಟಾಕಿ ತಯಾರಿಕಾ ಘಟಕಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ನಿಯಮಗಳ ಪ್ರಕಾರ ಪಟಾಕಿ ತಯಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕಗಳನ್ನು ಯಾವುದೇ ಮನೆಯೊಳಕ್ಕೆ ಒಯ್ಯಲು ಅನುಮತಿ ನೀಡಲಾಗುವುದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.