ನವದೆಹಲಿ: ದಲಿತ ವಿದ್ಯಾರ್ಥಿ ವೇಮುಲ ರೋಹಿತ್ ಅವರ ಆತ್ಮಹತ್ಯೆಯಿಂದಾಗಿ ಪ್ರತಿಭಟನೆಗೆ ಗುರಿಯಾಗಿರುವ ಹೈದರಾ
ಬಾದ್ ವಿ.ವಿ ಮೇಲೆ ಮಾನವ ಸಂಪನ್ಮೂಲ ಸಚಿವಾಲಯ ಒತ್ತಡ ಹೇರಿತ್ತೇ?
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಲಭ್ಯವಾಗಿರುವ ದಾಖಲೆಗಳು ಇಂಥದೊಂದು ಅನುಮಾನವನ್ನು ಹುಟ್ಟುಹಾಕಿವೆ.
2015ರ ಆಗಸ್ಟ್ 3 ಮತ್ತು 4ರ ಮಧ್ಯರಾತ್ರಿ ಅಂಬೇಡ್ಕರ್ ವಿದ್ಯಾರ್ಥಿ ಸಂಘಕ್ಕೆ ಸೇರಿದ ವಿದ್ಯಾರ್ಥಿಗಳು, ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಹೈದರಾಬಾದ್ ವಿ.ವಿ ಘಟಕದ ಆಗಿನ ಅಧ್ಯಕ್ಷ ಎನ್. ಸುಶೀಲ್ ಕುಮಾರ್ ಅವರ ಮೇಲೆ ಹಲ್ಲೆ ಮಾಡಿದರೆನ್ನಲಾದ ಘಟನೆ ವರದಿಯಾಗಿತ್ತು.
ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಬಂಡಾರು ದತ್ತಾತ್ರೇಯ ಆಗಸ್ಟ್ 17ರಂದು ಮಾನವ ಸಂಪನ್ಮೂಲ ಅಭಿ
ವೃದ್ಧಿ ಸಚಿವರಿಗೆ ಪತ್ರ ಬರೆದು ವಿವಿಯಲ್ಲಿ ಜಾತಿವಾದಿಗಳು, ತೀವ್ರಗಾಮಿಗಳು ಹಾಗೂ ದೇಶದ್ರೋಹಿಗಳು ಚಟುವಟಿಕೆ ನಡೆಸುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಪತ್ರದಲ್ಲಿ ಸುಶೀಲ್ ಕುಮಾರ್ ಮೇಲಿನ ಹಲ್ಲೆ ಕುರಿತು ಉಲ್ಲೇಖಿಸಿದ್ದರು.
ಬಂಡಾರು ದತ್ತಾತ್ರೇಯ ಅವರ ಪತ್ರವನ್ನು ಆಧರಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಸೆಪ್ಟೆಂಬರ್ 3ರಂದು ವಿ.ವಿ ಕುಲಸಚಿವರಿಗೆ ಪತ್ರ ಬರೆದು, ಈ ವಿಷಯದಲ್ಲಿ ಕೈಗೊಂಡ ಕ್ರಮಗಳನ್ನು ಕುರಿತು ವರದಿ ಸಲ್ಲಿಸುವಂತೆ ಕೇಳಿದ್ದರು. ಇದಾದ ಬಳಿಕ ಸೆಪ್ಟೆಂಬರ್ 24, ಅಕ್ಟೋಬರ್ 6, ಅದೇ ತಿಂಗಳ 20 ಮತ್ತು ನವೆಂಬರ್ 19ರಂದು ಇದೇ ರೀತಿಯ ಪತ್ರಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬರೆದಿತ್ತು.
ಈ ಮಧ್ಯೆ, ಆಗಸ್ಟ್ 31ರಂದು ವಿಶ್ವವಿದ್ಯಾಲಯದ ಶಿಸ್ತು ಪಾಲನಾ ಮಂಡಳಿ ಪ್ರಕರಣದ ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು. ಸೆಪ್ಟಂಬರ್ 7ರಂದು ವೇಮುಲ ರೋಹಿತ್ ಸೇರಿದಂತೆ ಐವರು ದಲಿತ ವಿದ್ಯಾರ್ಥಿಗಳನ್ನು ಅಮಾನತು ಮಾಡುವ ನಿರ್ಧಾರವನ್ನು ವಿಶ್ವವಿದ್ಯಾ
ಲಯದ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಕಾರ್ಮಿಕ ಸಚಿವ ದತ್ತಾತ್ರೇಯ ಬರೆದಿರುವ ಪತ್ರ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಹೈದರಾಬಾದ್ ವಿವಿಗೆ ಬರೆದಿರುವ ಪತ್ರಗಳು ಪ್ರಜಾವಾಣಿಗೆ ಲಭ್ಯವಾಗಿವೆ.
ತಪ್ಪು ಮಾಡಿಲ್ಲ: ಸಚಿವಾಲಯವು ವಿ.ವಿಯ ಮೇಲೆ ಒತ್ತಡ ಹೇರಿದೆ ಎಂಬುದು ಸರಿಯಲ್ಲ. ಕೇಂದ್ರ ಸಚಿವಾಲಯದ ನಿಯಮಾವಳಿ ಪ್ರಕಾರವೇ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕ್ರಮ ಕೈಗೊಂಡಿದೆ. ಸಂಸದರಿಂದ ಪತ್ರ ಬಂದರೆ 15 ದಿನಗಳೊಳಗೆ ಅದಕ್ಕೆ ಸ್ವೀಕೃತಿ ಪತ್ರ ನೀಡಬೇಕು. ಮುಂದಿನ 15 ದಿನದೊಳಗೆ ಉತ್ತರ ನೀಡಬೇಕು. ವಿ.ವಿಯಿಂದ ಈ ಅವಧಿಯಲ್ಲಿ ಪ್ರತಿಕ್ರಿಯೆ ಬಾರದ ಕಾರಣ ಮತ್ತೆ ಮತ್ತೆ ಪತ್ರ ಬರೆದು ನೆನಪಿಸಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯ ಹೇಳಿದೆ.
ಮುಖಂಡರ ಸರತಿ ಸಾಲು: ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಡೆರೆಕ್ ಒಬ್ರಿಯನ್ ನೇತೃತ್ವದ ತಂಡ ಹೈದರಾ
ಬಾದ್‌ಗೆ ಭೇಟಿ ನೀಡಿದೆ. ಹಾಗೆಯೇ ಲೋಕ ಜನಶಕ್ತಿ ಪಾರ್ಟಿಯ ಸಂಸದೀಯ ಪಕ್ಷದ ಮುಖಂಡ ಚಿರಾಗ್ ಪಾಸ್ವಾನ್ ಮತ್ತು ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ತಮ್ಮ ರಾಮಚಂದ್ರ ಪಾಸ್ವಾನ್ ನೇತೃತ್ವದ ನಿಯೋಗವೂ ರೋಹಿತ್ ಕುಟುಂಬವನ್ನು ಭೇಟಿಯಾಗಿದೆ.
ಕುಲಪತಿ ಬಂಧನಕ್ಕೆ ಆಗ್ರಹ:
ಬೆಂಗಳೂರು: ‘ಸಂಶೋಧನಾ ವಿದ್ಯಾರ್ಥಿ ವೇಮುಲ ರೋಹಿತ್ ಅವರ ಆತ್ಮಹತ್ಯೆಗೆ ಕಾರಣರಾದ ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿಯನ್ನು ಕೂಡಲೇ ಬಂಧಿಸಬೇಕು’ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉನ್ನತ ಶಿಕ್ಷಣ ನೀಡುವ ವಿವಿಗಳಲ್ಲಿ ಪ್ರತಿಭಾನ್ವಿತ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಜ.17 ರಂದು ಹೋರಾಟ ನಿರತನಾಗಿದ್ದ ವಿದ್ಯಾರ್ಥಿಯನ್ನು ಎಬಿವಿಪಿಯ ಒತ್ತಡಕ್ಕೆ ಮಣಿದು ಕುಲಪತಿಯವರು ವಿದ್ಯಾರ್ಥಿ ನಿಲಯದಿಂದ ಹೊರಹಾಕಿದ್ದಾರೆ. ಇದರಿಂದ ನೊಂದು ವೇಮುಲ ರೋಹಿತ್ ಆತ್ಮಹತ್ಯೆ ಮಾಡಿಕೊಂಡಿ
ಕದ್ದಾನೆ. ಇದಕ್ಕೆಲ್ಲ ಕುಲಪತಿ ನೇರ ಹೊಣೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.