ಚೆನ್ನೈ (ಪಿಟಿಐ): ವಿಶ್ವವಿದ್ಯಾಲಯಗಳಲ್ಲಿ ಹಿಂದಿ ಭಾಷೆ ಅನುಷ್ಠಾನ ಕುರಿತಂತೆ ಯುಜಿಸಿ ಹೊರಡಿಸಿರುವ ಸುತ್ತೊಲೆಯನ್ನು ತಮಿಳುನಾಡು ಸರ್ಕಾರ ವಿರೋಧಿಸಿದೆ.
ಯುಜಿಸಿ ಸುತ್ತೊಲೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದ ಅಣ್ಣಾ ವಿಶ್ವವಿದ್ಯಾಲಯ ಮತ್ತು ಅಲಗಪ್ಪ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವ ತಮಿಳುನಾಡು ಸರ್ಕಾರ ’ ಯುಜಿಸಿ ಸುತ್ತೊಲೆಯನ್ನು ಅನುಷ್ಠಾನ’ಗೊಳಿಸದಿರಲು ಸೂಚಿಸಿದೆ.
ಗುಜರಾತ್‌ನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಯಾಕೆ ಹಿಂದಿಯನ್ನು ಕಲಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಜಯಲಲಿತಾ ಅವರು ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿ ಭಾಷಾ ಕಲಿಕೆ ಸಮಂಜಸವಾದುದಲ್ಲ ಎಂದು ಹೇಳಿದ್ದಾರೆ.
ಬಲವಂತವಾಗಿ ಹಿಂದಿ ಹೇರಿಕೆ ಕುರಿತಂತೆ ವಿರೋಧ ಪಕ್ಷ ಡಿಎಂಕೆ ಮೌನವಾಗಿರುವುದರ ಹಿಂದಿನ ಉದ್ದೇಶ ಏನು ಎಂದು ಜಯಲಲಿತಾ ಡಿಎಂಕೆ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.