ADVERTISEMENT

ಹಿಂದೂಗಳ ಮೇಲೆ ದಾಳಿ: ಭಾರತ ಆತಂಕ

ಪಿಟಿಐ
Published 6 ನವೆಂಬರ್ 2016, 19:30 IST
Last Updated 6 ನವೆಂಬರ್ 2016, 19:30 IST

ನವದೆಹಲಿ : ಬಾಂಗ್ಲಾದೇಶದಲ್ಲಿನ ಹಿಂದೂಗಳ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಭಾರತದ ಆತಂಕವನ್ನು ಅಲ್ಲಿನ ಪ್ರಧಾನಿ ಶೇಖ್‌ ಹಸಿನಾ ಅವರಿಗೆ ತಿಳಿಸುವಂತೆ ಢಾಕಾದಲ್ಲಿನ  ಭಾರತೀಯ ಹೈಕಮಿಷನರ್‌ ಅವರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸೂಚಿಸಿದ್ದಾರೆ.

‘ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವುದು ಆತಂಕ ಮೂಡಿಸಿದೆ. ಈ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಭಾರತದ ಕಾಳಜಿಯನ್ನು ಬಾಂಗ್ಲಾ ಸರ್ಕಾರಕ್ಕೆ ಮನವರಿಕೆ ಮಾಡುವಂತೆ ರಾಯಭಾರಿಗೆ ಸೂಚಿಸಿದ್ದೇನೆ’ ಎಂದು ಸುಷ್ಮಾ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.

ಬಂಧನ: ಶನಿವಾರ ನಡೆದ  ದಾಳಿಗೆ ಸಂಬಂಧಿಸಿದಂತೆ  9 ಮಂದಿಯನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಲಾಗಿದೆ. ಇದರಿಂದಾಗಿ ಹಿಂದೂಗಳ ಮೇಲೆ  ನಡೆದ ದಾಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 53 ಮಂದಿಯನ್ನು ಬಂಧಿಸಿದಂತಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.