ನವದೆಹಲಿ (ಪಿಟಿಐ): ಎಲ್ಲಾ ಭಾರತೀಯರು ನಿಮಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ ಎಂಬ ಸಂದೇಶವನ್ನು ತಲುಪಿಸಲು ಸಿಯಾಚಿನ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ದೇಶದ ಗಡಿ ಕಾಯುತ್ತಿರುವ ಭದ್ರತಾ ಸಿಬ್ಬಂದಿಯೊಂದಿಗೆ ಗುರುವಾರ ಸ್ವಲ್ಪ ಸಮಯವನ್ನು ಕಳೆದರು.
‘ಇದೇ ಮೊದಲ ಬಾರಿಗೆ ಒಬ್ಬ ಪ್ರಧಾನಿಗೆ ಬೆಳಕಿನ ಹಬ್ಬದಂದು ನಮ್ಮ ಸೈನಿಕರೊಂದಿಗೆ ಕಾಲ ಕಳೆಯುವ ಅದ್ಭುತ ಅವಕಾಶ ಲಭಿಸಿದೆ. ಸಿಯಾಚಿನ್ ಹಿಮಪರ್ವತದಿಂದ ವೀರ ಯೋಧರೊಂದಿಗೆ ಎಲ್ಲಾ ಭಾರತೀಯರಿಗೂ ದೀಪಾವಳಿ ಹಬ್ಬದ ಶುಭಾಷಯಗಳು’ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಅಲ್ಲದೇ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೂ ಅಲ್ಲಿಂದಲೇ ಶುಭಾಷಯ ತಿಳಿಸಿದ್ದಾರೆ.
‘ಸಿಯಾಚಿನ್‌ನಿಂದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ದೀಪಾವಳಿಯ ಹಾರ್ದಿಕ ಶುಭಾಷಯಗಳು. ಪ್ರಣಬ್ ದಾ (ಬಂಗಾಳಿ ಭಾಷೆಯಲ್ಲಿ ದಾ ಎಂದರೆ ಸಹೋದರ) ಅವರಿಗೆ ದೊರೆತ ಕೆಲವು ವಿಶಿಷ್ಠ ಶುಭಾಷಯಗಳಲ್ಲಿ ಇದೂ ಒಂದಾಗಲಿದೆ’ ಎಂದು ಪ್ರಧಾನಿ ಅವರು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.