ADVERTISEMENT

’ಶಾ’ ಪರ್ಷಿಯನ್‌ ಪದ, ಬಿಜೆಪಿ ಮೊದಲು ತನ್ನ ಮುಖಂಡರ ಹೆಸರು ಬದಲಿಸಲಿ: ಇತಿಹಾಸಕಾರ

ಏಜೆನ್ಸೀಸ್
Published 11 ನವೆಂಬರ್ 2018, 12:07 IST
Last Updated 11 ನವೆಂಬರ್ 2018, 12:07 IST
   

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೆಸರಿನಲ್ಲಿರುವ ’ಶಾ’ ಪರ್ಷಿಯನ್‌ ಶಬ್ದ, ಸಂಸ್ಕೃತದಿಂದ ಬಂದಿರುವುದಲ್ಲ. ಬಿಜೆಪಿ ನಗರಗಳ ಹೆಸರುಗಳನ್ನು ಬದಲಿಸುತ್ತಿದೆ, ಆದರೆ ಮೊದಲು ತನ್ನ ಮುಖಂಡರ ಹೆಸರುಗಳನ್ನು ಬದಲಿಸುವುದರಿಂದ ಪ್ರಾರಂಭಿಸಬೇಕು ಎಂದು ಇತಿಹಾಸಕಾರ ಪ್ರೊ.ಇರ್ಫಾನ್‌ ಹಬೀಬ್‌ ಹೇಳಿದ್ದಾರೆ.

ಮುಸ್ಲಿಂ ಹೆಸರಿನಂತೆ ಧ್ವನಿಸುವ ನಗರಗಳ ಹೆಸರಗಳನ್ನು ಬದಲಿಸುವ ಪ್ರಕ್ರಿಯೆಯಲ್ಲಿ ಕೆಲ ವಾರಗಳಿಂದ ಬಿಜೆಪಿ ನಿರತವಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಮುಘಲ್‌ಸರೈ ರೈಲು ನಿಲ್ದಾಣವನ್ನು ಪಂಡಿತ್ ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌ ಆಗಿ ಬದಲಿಸಿದರು. ಅಲಹಾಬಾದ್‌ನ್ನು ಪ್ರಯಾಗ್‌ರಾಜ್ ಎಂದೂ ಫೈಜಾಬಾದ್ ಜಿಲ್ಲೆಯನ್ನು ’ಅಯೋಧ್ಯೆ’ ಆಗಿ ಮರುನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಗುಜರಾತ್ ಸರ್ಕಾರ ಅಹಮದಾಬಾದ್‌ಗೆ ’ಕರ್ಣಾವತಿ’ ಎಂದು ಮರುನಾಮಕರಣ ಮಾಡಲು ಸಿದ್ಧವಿರುವುದಾಗಿ ಘೋಷಿಸಿದೆ.

ಈ ಬೆಳವಣಿಗೆಗಳಿಂದ ಬಿಜೆಪಿ ಅನೇಕರಿಂದ ಟೀಕೆಗೆ ಗುರಿಯಾಗಿದೆ. ಪ್ರೊ.ಇರ್ಫಾನ್‌ ಹಬೀಬ್‌ ಅವರು ಈ ಕುರಿತು ಎಎನ್ಐಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ’ಶಾ’ ಪದದ ಪ್ರಸ್ತಾಪ ಮಾಡಿದ್ದು, ಬಿಜೆಪಿ ಮೊದಲು ತನ್ನ ಮುಖಂಡರ ಹೆಸರುಗಳನ್ನು ಬದಲಿಸುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.