ನವದೆಹಲಿ (ಪಿಟಿಐ): ದೇಶದ 638 ಜನ ₹ 3,770 ಕೋಟಿ ಕಪ್ಪು ಹಣ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಒಟ್ಟು 638 ಜನ ತಾವು ಹೊಂದಿರುವ ಕಪ್ಪು ಹಣದ ಘೋಷಣೆ ಮಾಡಿಕೊಂಡಿದ್ದಾರೆ. ಕಪ್ಪು ಹಣ ಘೋಷಣೆ ಮಾಡಿಕೊಳ್ಳಲು ಸೆ.30 ಕೊನೆಯ ದಿನವಾಗಿತ್ತು. ಡಿಸೆಂಬರ್ 31ರೊಳಗೆ ದಂಡ ಕಟ್ಟಿ ಕಪ್ಪುಹಣ ಘೋಷಣೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ದೆಹಲಿ, ರಾಜಸ್ತಾನ, ಉತ್ತರ ಪ್ರದೇಶ, ಕರ್ನಾಟಕ ರಾಜ್ಯಗಳ ಹಲವರು ಕಪ್ಪು ಹಣವನ್ನು ಘೋಷಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.