ADVERTISEMENT

ಮೇಘಾಲಯದಲ್ಲಿ ದಿಢೀರ್‌ ಪ್ರವಾಹ: 10 ಮಂದಿ ಸಾವು

ಪಿಟಿಐ
Published 6 ಅಕ್ಟೋಬರ್ 2024, 14:28 IST
Last Updated 6 ಅಕ್ಟೋಬರ್ 2024, 14:28 IST
<div class="paragraphs"><p>ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಯಿತು </p></div>

ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಯಿತು

   

–ಪಿಟಿಐ ಚಿತ್ರ

ಶಿಲ್ಲಾಂಗ್‌: ಮೇಘಾಲಯದ ದಕ್ಷಿಣ ಗಾರೋ ಪರ್ವತ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾದ ದಿಢೀರ್‌ ಪ್ರವಾಹದಲ್ಲಿ ಸಿಲುಕಿ ಒಂದೇ ಕುಟುಂಬದ ಏಳು ಮಂದಿ ಸೇರಿ ಹತ್ತು ಜನರು ಮೃತಪಟ್ಟಿದ್ದಾರೆ.

ADVERTISEMENT

ಎಡಬಿಡದ ಮಳೆ ಸುರಿದ ಪರಿಣಾಮ ಗಾಸುವಾಪಾರ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತ ಸಂದರ್ಭದಲ್ಲಿ ಕುಟುಂಬದ ಏಳು ಮಂದಿ ಮನೆಯೊಳಗೆ ಇದ್ದರು. ಮೃತರ ಪೈಕಿ ಮೂವರು ಅಪ್ರಾಪ್ತರು ಇದ್ದಾರೆ.

ಪ್ರವಾಹಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಶೋಧ ಕಾರ್ಯಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣೆ ದಳದ ಸಿಬ್ಬಂದಿಯನ್ನು ನಿಯೋಜಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.