ಚೆನ್ನೈ: ತಮಿಳುನಾಡು ಆಡಳಿತ ಪಕ್ಷ ಡಿಎಂಕೆಯ 10 ಶಾಸಕರು ಎಐಎಡಿಎಂಕೆ ಪಕ್ಷದ ಸಂಪರ್ಕದಲ್ಲಿರುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.
ಒಂದು ದಿನದ ಹಿಂದಷ್ಟೇ ಡಿಎಂಕೆ ಸಂಸದ ಡಿಎನ್‌ವಿ ಎಸ್. ಸೆಂಥಿಲ್‌ಕುಮಾರ್ ಅವರು ಎಐಎಡಿಎಂಕೆಯ ಹಿರಿಯ ಮುಖಂಡರು ಶೀಘ್ರದಲ್ಲೇ ತಮ್ಮ ಪಕ್ಷವನ್ನು ಸೇರಲಿದ್ದಾರೆ ಎಂದಿದ್ದರು.
ಈ ಬಗ್ಗೆ ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿದ ಪಳನಿಸ್ವಾಮಿ, ನಮ್ಮ ಪಕ್ಷದವರು ಡಿಎಂಕೆ ಸೇರ್ಪಡೆಗೊಳ್ಳುತ್ತಿರುವ ವಿಚಾರ ಸುಳ್ಳು. ಅವರ 10 ಶಾಸಕರು ನಮ್ಮ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದರು.
ತಕ್ಷಣ ಪ್ರತಿಕ್ರಿಯೆ ನೀಡಿರುವ ಡಿಎಂಕೆ ವಕ್ತಾರ ಆರ್.ಎಸ್. ಭಾರತಿ ಅವರು ಎಐಎಡಿಎಂಕೆಯ 66 ಶಾಸಕರ ಪೈಕಿ 50 ಶಾಸಕರು ತಮ್ಮ ಪಕ್ಷದ ಜೊತೆ ಸಂಪರ್ಕದಲ್ಲಿದ್ದಾರೆ. ಪಕ್ಷಾಂತರ ಮಾಡಲು ಸಿದ್ಧರಾಗಿದ್ದಾರೆ ಎಂದಿದ್ದಾರೆ.
ಮೊದಲು ಎಐಎಡಿಎಂಕೆ ಜೊತೆ ಸಂಪರ್ಕದಲ್ಲಿರುವ ಡಿಎಂಕೆ ಶಾಸಕರ ಪಟ್ಟಿಯನ್ನು ಪಳನಿಸ್ವಾಮಿ ಮೊದಲು ಬಿಡುಗಡೆ ಮಾಡಲಿ, ಬಳಿಕ ನಮ್ಮ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಆರ್.ಎಸ್.ಭಾರತಿ ತಿರುಗೇಟು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.