ADVERTISEMENT

ಉತ್ತರ ಪ್ರದೇಶ: ಅಯೋಧ್ಯೆ ಜಿಲ್ಲಾಧಿಕಾರಿ ಸೇರಿದಂತೆ 10 IAS ಅಧಿಕಾರಿಗಳ ವರ್ಗಾವಣೆ

ಪಿಟಿಐ
Published 14 ಜುಲೈ 2024, 2:47 IST
Last Updated 14 ಜುಲೈ 2024, 2:47 IST
   

ಲಖನೌ: ಅಯೋಧ್ಯೆಯ ಜಿಲ್ಲಾಧಿಕಾರಿ ಸೇರಿದಂತೆ ರಾಜ್ಯದ ಹತ್ತು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಉತ್ತರ ಪ್ರದೇಶ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಸೋನಭದ್ರಾ ಜಿಲ್ಲಾಧಿಕಾರಿಯಾಗಿದ್ದ ಚಂದ್ರವಿಜಯ್‌ ಸಿಂಗ್‌ ಅವರನ್ನು ಅಯೋಧ್ಯೆಯ ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಅಯೋಧ್ಯೆಯಲ್ಲಿದ್ದ ನಿತೀಶ್‌ ಕುಮಾರ್‌ ಅವರನ್ನು ದಕ್ಷಿಣಾಂಚಲ ವಿದ್ಯುತ್‌ ವಿತರಣಾ ನಿಗಮಕ್ಕೆ ವರ್ಗಾವಣೆ ಮಾಡಲಾಗಿದೆ. ರಾಜಭವನದ ವಿಶೇಷ ಕಾರ್ಯದರ್ಶಿಯಾಗಿದ್ದ ಬದ್ರಿನಾಥ್‌ ಸಿಂಗ್ ಅವರನ್ನು ಸೋನಭದ್ರಾ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ADVERTISEMENT

ಬುದೌನ್‌ ಜಿಲ್ಲಾಧಿಕಾರಿ ಮನೋಜ್‌ ಕುಮಾರ್‌ ಅವರನ್ನು ರಾಜ್ಯ ಶಿಕ್ಷಣ ಸೇವಾ ಆಯ್ಕೆ ಸಮಿತಿ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಅವರ ಜಾಗಕ್ಕೆ ನಿಧಿ ಶ್ರೀವಾಸ್ತವ ಅವರನ್ನು ವರ್ಗಾಯಿಸಲಾಗಿದೆ.

ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಪ್ರಾಧಿಕಾರದಲ್ಲಿದ್ದ ದಿವ್ಯಾ ಮಿತ್ತಲ್‌ ಹಾಗೂ ದೇವಾರಿಯಾ ಡಿಸಿ ಅಖಂಡ ಪ್ರತಾಪ್‌ ಸಿಂಗ್‌ ಅವರನ್ನು ಪರಸ್ಪರ ವರ್ಗಾವಣೆ ಮಾಡಲಾಗಿದೆ.

ಔರೈಯ ಜಿಲ್ಲಾಧಿಕಾರಿ ನೇಹಾ ಪ್ರಕಾಶ್‌ ಅವರನ್ನು ತರಬೇತಿ ಮತ್ತು ಉದ್ಯೋಗ ಇಲಾಖೆ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಅವರ ಜಾಗಕ್ಕೆ ಲಖನೌ ಅಭಿವೃದ್ಧಿ ಪ್ರಾಧಿಕಾರದ (ಎಲ್‌ಡಿಎ) ಉಪಾಧ್ಯಕ್ಷ ಐ.ಎಂ. ತ್ರಿಪಾಠಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಮುಖ್ಯಮಂತ್ರಿಗಳ ವಿಶೇಷ ಕಾರ್ಯದರ್ಶಿಯಾಗಿದ್ದ ಪ್ರಥಮೇಶ್‌ ಕುಮಾರ್‌ ಅವರು ತ್ರಿಪಾಠಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.