ನವದೆಹಲಿ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ 10 ಭಾರತೀಯರ ಬಿಡುಗಡೆಯಾಗಿದ್ದು, ಅವರು ಭಾರತಕ್ಕೆ ಮರಳುತ್ತಿದ್ದಾರೆ.
ರಷ್ಯಾದ ಸೇನೆಯ ವಿವಿಧ ಹುದ್ದಗೆಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರು ಮರಳುತ್ತಿರುವುದನ್ನು ರಷ್ಯಾ ಖಚಿತಪಡಿಸಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರ ರಣ್‌ಧೀರ್ ಜೈಸ್ವಾಲ್ ಗುರುವಾರ ತಿಳಿಸಿದ್ದಾರೆ.
ರಷ್ಯಾನ್ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಭಾರತೀಯರು ಕಳೆದ ತಿಂಗಳು ಮೃತಪಟ್ಟಿದ್ದರು. ಈ ಬಳಿಕ ಭಾರತವು, ಜೀವಕ್ಕೆ ಅಪಾಯ ತಂದೊಡ್ಡುವ ಕೆಲಸಕ್ಕೆ ಸೇರದಂತೆ ಎಚ್ಚರಿಕೆ ನೀಡಿತ್ತು.
‘ರಷ್ಯಾ ಸೇನೆಯ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಭಾರತೀಯರ ಬಗ್ಗೆಯೂ ಗಮನಹರಿಸಲಾಗಿದೆ. ಭಾರತಕ್ಕೆ ಮರಳಲು ಇಚ್ಛಿಸುವವರ ಜೊತೆ ಸಂಪರ್ಕ ಸಾಧಿಸಲಾಗಿದ್ದು, ಅವರನ್ನು ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಜೈಸ್ವಾಲ್ ತಿಳಿಸಿದರು.
ಕಳೆದ ವರ್ಷದಿಂದ ಈವರೆಗೆ 200 ಭಾರತೀಯರು ರಷ್ಯಾದ ಸೇನೆಯ ಸಹಾಯಕರಾಗಿ ಸೇರಿಕೊಂಡಿದ್ದಾರೆ ಎಮದು ವರದಿಯೊಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.