ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 24 ಅಕ್ಟೋಬರ್‌ 2023

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2023, 13:14 IST
Last Updated 24 ಅಕ್ಟೋಬರ್ 2023, 13:14 IST
<div class="paragraphs"><p>ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p></div>

ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

   

ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಹೇಳಿಕೆ: ಡಿಕೆಶಿ ವಿರುದ್ಧ ಎಚ್‌ಡಿಕೆ ಕಿಡಿ, ಚೀನಾ ಗಡಿ ಸಮೀಪ 'ಶಸ್ತ್ರ' ಪೂಜೆ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್,Icc World Cup: ಬಾಂಗ್ಲಾಗೆ 383 ರನ್‌ಗಳ ಗೆಲುವಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.

ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಹೇಳಿಕೆ: ಡಿಕೆಶಿ ವಿರುದ್ಧ ಎಚ್‌ಡಿಕೆ ಕಿಡಿ

ಜೆಡಿಎಸ್‌ ನಾಯಕ ಎಚ್‌ಡಿ ಕುಮಾರಸ್ವಾಮಿ

‘ಕನಕಪುರವು ಬೆಂಗಳೂರು ವ್ಯಾಪ್ತಿಗೆ ಸೇರಲಿದೆ’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಕಿಡಿ ಕಾರಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು, ‘ಇದು ರಾಮನಗರ ಜಿಲ್ಲೆ ಜನರಿಗೆ ಮಾಡುವ ದ್ರೋಹ ಮತ್ತು ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ.

ADVERTISEMENT

ರಾಜ್ಯದಲ್ಲಿ ‌ ಶಾಂತಿ ಮರುಸ್ಥಾಪನೆಯಾಗುತ್ತದೆ: ಮಣಿಪುರ ಸಿಎಂ ಬಿರೇನ್ ಸಿಂಗ್

ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್

ಮಣಿಪುರ ರಾಜ್ಯ ಸಹಜ ಸ್ಥಿತಿಗೆ ಮರಳುತ್ತಿದೆ. ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ.

‘ಪುಟಿನ್‌ ಆರೋಗ್ಯವಾಗಿದ್ದಾರೆ’: ಹೃದಯಸ್ತಂಭನ ವದಂತಿ ಅಲ್ಲಗಳೆದ ರಷ್ಯಾ ಸರ್ಕಾರ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌

ರಷ್ಯಾ ಅಧಕ್ಷ ವ್ಲಾಡಿಮಿರ್‌ ಪುಟಿನ್‌ ಆರೋಗ್ಯವಾಗಿದ್ದಾರೆ ಎಂದು ಕ್ರೆಮ್ಲಿನ್‌ ಮಾಹಿತಿ ನೀಡಿದೆ.

‘ಪುಟಿನ್‌ ಅವರಿಗೆ ಹೃದಯಸ್ತಂಭನ ಉಂಟಾಗಿದ್ದು, ಅವರು ಕುಸಿದುಬಿದ್ದಿದ್ದಾರೆ’ ಎಂಬ ವದಂತಿಗೆ ರಷ್ಯಾ ಸರ್ಕಾರ ಕ್ರೆಮ್ಲಿನ್‌ ತೆರೆ ಎಳೆದಿದ್ದು, ಎಲ್ಲವೂ ಸುಳ್ಳು ಪುಟಿನ್‌ ಸ್ವಾಸ್ಥ್ಯವಾಗಿದ್ದಾರೆ ಎಂದು ಹೇಳಿದೆ

ಭಾರತ ಸೇರಿ ಏಳು ದೇಶಗಳ ನಾಗರಿಕರಿಗೆ ಉಚಿತ ಪ್ರವಾಸಿ ವೀಸಾ: ಶ್ರೀಲಂಕಾ

.

ಏಳು ದೇಶಗಳ ನಾಗರಿಕರಿಗೆ ಉಚಿತ ಪ್ರವಾಸಿ ವೀಸಾ ನೀಡಲು ಶ್ರೀಲಂಕಾದ ಸಂಪುಟ ಅನುಮೋದನೆ ನೀಡಿದೆ.

ಚೀನಾ ಗಡಿ ಸಮೀಪ 'ಶಸ್ತ್ರ' ಪೂಜೆ ನೆರವೇರಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್

ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್

ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಸೇನಾ ಯೋಧರೊಂದಿಗೆ 'ಶಸ್ತ್ರ' ಪೂಜೆ ನೆರವೇರಿಸಿದರು. 

Israel-Hamas War | ಇಸ್ರೇಲ್‌ಗೆ ಬಂದಿಳಿದ ಫ್ರೆಂಚ್‌ ಅಧ್ಯಕ್ಷ ಮ್ಯಾಕ್ರನ್

ಫ್ರೆಂಚ್‌ ಅಧ್ಯಕ್ಷ ಮ್ಯಾಕ್ರನ್

ಇಸ್ರೇಲ್-ಹಮಾಸ್ ಸಂಘರ್ಷದ ನಡುವೆಯೇ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್ ಇಸ್ರೇಲ್‌ನ ಟೆಲ್ ಅವಿವ್‌ಗೆ ಇಂದು ಬಂದಿಳಿದ್ದಾರೆ.

Icc World Cup: ಬಾಂಗ್ಲಾಗೆ 383 ರನ್‌ಗಳ ಗೆಲುವಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಶತಕ ಸಂಭ್ರಮ ಆಚರಿಸಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ 

ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ರನ್‌ಗಳ ಪ್ರವಾಹವನ್ನೇ ಹರಿಸುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶದ ವಿರುದ್ಧ 382 ರನ್‌ ಪೇರಿಸಿದೆ.

ದೇಶದ ಜನತೆಗೆ ವಿಜಯದಶಮಿ ಶುಭಾಶಯ ಕೋರಿದ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿ

ದೇಶದಾದ್ಯಂತ ವಿಜಯದಶಮಿ ಹಬ್ಬದ ಸಡಗರ ಮನೆ ಮಾಡಿದ್ದು, ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ದೇಶದ ಜನತೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಲಿಯೋ ಸಿನಿಮಾದ ನಿರ್ದೇಶಕ ಲೋಕೇಶ್‌ ಕನಕರಾಜ್‌ಗೆ ಗಾಯ

ಚಿತ್ರಕೃಪೆ: @Dir_Lokesh

ಇತ್ತೀಚಿಗೆ ತೆರೆ ಕಂಡಿರುವ ಲಿಯೋ ಚಿತ್ರದ ನಿರ್ದೇಶಕ ಲೋಕೇಶ್‌ ಕನಕರಾಜ್‌ ಅವರು ಸಿನಿಮಾ ಪ್ರಚಾರದ ವೇಳೆ ಗಾಯಗೊಂಡಿದ್ದಾರೆ.

ಮಣಿಪುರದಲ್ಲಿ ಹಿಂಸಾಚಾರ ನಡೆದಿಲ್ಲ, ನಡೆಸಿರುವುದು: ಮೋಹನ್‌ ಭಾಗವತ್‌

ಮೋಹನ್‌ ಭಾಗವತ್‌

ಹಲವಾರು ವರ್ಷಗಳಿಂದ ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳು ಸಹಬಾಳ್ವೆಯಿಂದ ಬಾಳುತ್ತಿದ್ದಾರೆ. ಅದು ಹೇಗೆ ಇದ್ದಕ್ಕಿದ್ದಂತೆ ಹಿಂಸಾಚಾರ ಭುಗಿಲೆದ್ದಿತು? ಸಂಘರ್ಷದಿಂದ ಬಾಹ್ಯ ಶಕ್ತಿಗಳಿಗೆ ಪ್ರಯೋಜನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.